ಉದಯವಾಹಿನಿ  ದೇವರಹಿಪ್ಪರಗಿ:ಹದಿ ಹರೆಯದ ವಯಸ್ಸಿನ ಮಕ್ಕಳು ಬಾಲಾವಸ್ಥೆಯಿಂದ ಪ್ರೌಢಾವಸ್ಥೆಗೆ ತಲುಪುವ ಹಂತದಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಉಂಟಾಗುತ್ತವೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಶಾಲಾ ಮುಖ್ಯ ಗುರುಗಳಾದ ಎಂ.ಬಿ. ಯಡ್ರಾಮಿ ಹೇಳಿದರು.ತಾಲೂಕಿನ ಕೆರೂಟಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕಲಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರದಂದು ನಡೆದ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಪ್ತ ಸಮಾಲೋಚನಕರಾದ ಅಪ್ಪಸಾಬ ಮಾಂಗ ಮಾತನಾಡಿದ ಅವರು, ಹದಿಹರೆಯದವರು ಆರೋಗ್ಯವಂತ ಸಮಾಜದ ಆಸ್ತಿ, ದೈಹಿಕ ಮಾನಸಿಕ ಆರೋಗ್ಯ ಸಮಸ್ಯೆಗಳು ಉಂಟಾದರೆ ಪ್ರಾಥಮಿಕ ಆರೋಗ್ಯ ಘಟಕಗಳಲ್ಲಿ ಇರುವ ಸ್ನೇಹ ಕ್ಲಿನಿಕ್ ನಿಂದ ಮಾರ್ಗದರ್ಶನ ಪಡೆಯಬಹುದು ಎಂದು ಹೇಳಿದರು.ಡಾ.ಸಂತೋಷ ಟೆಂಗಳಿ ಮಾತನಾಡಿ ಕ್ಷಯರೋಗ ಹಾಗೂ ಏಡ್ಸ್ ರೋಗದ ಕುರಿತು ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಂ.ಡಿ.ಮೋತಿಬಾಯಿ ಅವರು ಮಾತನಾಡಿ ಸಾಂಕ್ರಾಮಿಕ ರೋಗಗಳ ಕುರಿತು ಮಾಹಿತಿ ನೀಡಿದರು.ಇದೇ ಸಂದರ್ಭದಲ್ಲಿ ಶಿಕ್ಷಕರುಗಳಾದ ಎಸ್.ಎಸ್.ಗುಮಶೆಟ್ಟಿ, ಎಸ್.ಎಸ್. ಶಿಂಧೆ,ಪಿ.ಜಿ.ಬಿರಾದಾರ, ಗೀತಾ ಈರಣ್ಣ ಪತ್ತಾರ, ಕುಮಾರಿ ರೂಪಾ ಕುಂಬಾರ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು .

Leave a Reply

Your email address will not be published. Required fields are marked *

error: Content is protected !!