
ಉದಯವಾಹಿನಿ,ಚಿಂಚೋಳಿ: ತಾಲ್ಲೂಕಾ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕನಲ್ಲಿ ಗುರುವಾರ ಅಧ್ಯಕ್ಷರ ಉಪಾಧ್ಯಕ್ಷರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಗರು ವಾಮ ಮಾರ್ಗದಿಂದ ಪಿಕಾರ್ಡ ಬ್ಯಾಂಕ್ ಗೆ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ತಾಲ್ಲೂಕಾಧ್ಯಕ್ಷ ಸಂತೋಷ ಗಡಂತಿ ಆರೋಪಿಸಿದ್ದಾರೆ.ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಪಿಕಾರ್ಡ ಬ್ಯಾಂಕ್ ಒಟ್ಟು 15 ನಿರ್ದೇಶಕರಲ್ಲಿ ಅಧ್ಯಕ್ಷರ ನಡೆದ ಚುನಾವಣೆಯಲ್ಲಿ 4ಜನ ನಿರ್ದೇಶಕರ ಮತಗಳು ಕಾಂಗ್ರೆಸ್ ಮುಖಂಡರು ಚಲಾವಣೆ ಮಾಡಿದ್ದಾರೆ ಇದರಿಂದ ನಮಗೆ ಹಿನ್ನಡೆಯಾಗಿದ್ದು ಇದನ್ನು ಕಾನೂನು ಬಾಹಿರವಾಗಿದೆ,ಸಹಕಾರ ಕ್ಷೇತ್ರದ ಕಾನೂನಿನಲ್ಲಿ ಯಾರಾದರೂ ಅಸ್ವಸ್ಥ ಹಾಗೂ ಮತ ಚಲಾವಣೆಗೆ ತೊಂದರೆ ಇದ್ದರೆ ಬೇರೆಯವರು ಹಾಕಲು ಅರ್ಹರು ಆದರೆ ಈ ನಾಲ್ಕು ನಿರ್ದೆಶಕರು ಸ್ವಸ್ಥರಾಗಿದ್ದು ಕಾಂಗ್ರೆಸ್ ಮುಖಂಡರು ಮತ ಚಲಾಯಿಸಿದ್ದು ಕಾನೂನು ಬಹಿರವಾಗಿದ್ದು ನಾವು ಮುಂದೆ ತಹಸೀಲ್ದಾರ್ ಹಾಗೂ ಸಹಾಯಕ ಆಯುಕ್ತರಿಗೂ ನಾಲ್ಕು ಜನರ ನಿರ್ದೇಶಕರ ಸದಸ್ಯತ್ವ ರದ್ದುಪಡಿಸುವಂತೆ ದೂರು ಸಲ್ಲಿಸಿ ನ್ಯಾಯಾಲಯ ಮೋರೆ ಹೋಗಿ ಅವರ ಸದಸ್ಯತ್ವ ರದ್ದುಪಡಿಸುವುದು ಖಚಿತ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪಿಕಾರ್ಡ ನಿರ್ದೇಶಕ ಜಗದೀಶಸಿಂಗ್ ಠಾಕೂರ್,ಶರಣುಗೌಡ ಮುದ್ದಾ,ಹಣಮಂತರಾವ ತೇಗಲತೀಪ್ಪಿ,ವಿಜಯಕುಮಾರ ಚೆಗಂಟಾ,ಭೀಮಶೇಟ್ಟಿ ಮುರುಡಾ,ಗಿರಿರಾಜ ನಾಟೀಕಾರ,ಅಭಿಷೇಕ ಮಲಕನೂರ,ಹಣಮಂತ ಭೋವಿ,ಅನೇಕರಿದ್ದರು.
