ಉದಯವಾಹಿನಿ ಕೆ.ಆರ್.ಪೇಟೆ: ತಾಲೂಕಿನ ಕಸಬಾ ಹೋಬಳಿಯ ನಾರ್ಗೊನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಭಾರತ ಸಂವಿಧಾನದ ಪೀಠಿಕೆಯ ಜಾಗತಿಕ ವಾಚನ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು, ಅಂಗನವಾಡಿ ಶಿಕ್ಷಕಿ ಈ.ಶಿವಮ್ಮರವರು ಮಾತನಾಡಿ ಜಗತ್ತಿನಾದ್ಯಂತ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯನ್ನು ಮಾಡಲಾಗುತ್ತಿದೆ ಅದೇ ರೀತಿ ನಮ್ಮ ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ದಿನವನ್ನು ಈ ದಿನ ಆಯೋಜನೆ ಮಾಡುವ ಮೂಲಕ ಪ್ರಜಾಪ್ರಭುತ್ವದ ನಿರ್ಮಾತೃ ಡಾಕ್ಟರ್. ಬಿ.ಆರ್.ಅಂಬೇಡ್ಕರ್ ಅವರ ಸ್ಮರಿಸಿಕೊಳ್ಳುವ ಮೂಲಕ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ನಾವು ಭಾರತದ ಸಂವಿಧಾನಕ್ಕೆ ಗೌರವಿಸುವ ಮೂಲಕ ಸಂವಿಧಾನದ ಆಸೆಗಳನ್ನು ಆಶಯಗಳನ್ನು ಓದಿಕೊಂಡು ಮೈಗೂಡಿಸಿಕೊಂಡು ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ಸಲಹೆ ನೀಡಿದರು,_ಇದೇ ಸಂದರ್ಭದಲ್ಲಿ ನಿಸರ್ಗ ಸಾಯಿಕುಮಾರ್, ಐಶ್ವರ್ಯ. ಎನ್.ಕೆ,ಜಯಂತಿ, ಗೌರಮ್ಮ, ಜಯಮ್ಮ, ರಕ್ಷಿತಾ, ಅಂಗನವಾಡಿ ಸಹಾಯಕಿ ಸುಜಾತ, ಹಾಗೂ ಅಂಗನವಾಡಿ ಮಕ್ಕಳು ಹಾಜರಿದ್ದರು,
