ಉದಯವಾಹಿನಿ, ಮುದಗಲ್: ಪಟ್ಟಣ ಸಮೀಪದ ಮಟ್ಟೂರು ಗ್ರಾಮದ ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಭಕ್ತರ ಮಧ್ಯೆ ಶುಕ್ರವಾರ ಅದ್ದೂರಿಯಾಗಿ ರಥೋತ್ಸವ ಜರುಗಿತು. ಶ್ರಾವಣಮಾಸದ ಬೆನಕನ ಅಮಾವಾಸ್ಯೆ ನಿಮಿತ್ತ ಶ್ರೀ ರಾಮಲಿಂಗೇಶ್ವರ ಜಾತ್ರೆ ಜರುಗಿತು. ಬೆಳಿಗ್ಗೆ ಶ್ರೀ ರಾಮಲಿಂಗೇಶ್ವರ ಮೂರ್ತಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ವಿಶೇಷ ಪೂಜೆ ನಡೆಯಿತು. ರಥೋತ್ಸವ ಸಂದರ್ಭದಲ್ಲಿ ಯುವಕರು ಕುಣಿದು ಕುಪ್ಪಳಿಸಿದರು ಹಾಗೂ ಡೊಳ್ಳು ಸೇರಿದಂತೆ ಇನ್ನಿತರ ಕಲಾ ತಂಡಗಳು ನೋಡುವರನ್ನು ಆಕರ್ಷಿಸಿದವು. ಜಾತ್ರೆ ಅಂಗವಾಗಿ ರಕ್ತದಾನ ಶಿಬಿರ; ರಾಮಲಿಂಗೇಶ್ವರ ಜಾತ್ರಾ ನಿಮಿತ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಸುಮಾರು 30 ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಮುಖಂಡರು, ಗ್ರಾಮಸ್ಥರು ಸ್ಥಳೀಯ ಠಾಣೆಯ ಪಿಎಸ್ಐ ವೆಂಕಟೇಶ್ ಎಂ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಬಂದೋಬಸ್ತ್ ವಹಿಸಿದ್ದರು.
