
ಉದಯವಾಹಿನಿ, ಕೊಲ್ಹಾರ:ವ್ಯಾಪ್ತಿಯಲ್ಲಿ ಬರುವ ಬಳೂತಿ ಪುಟ್ಟ ಗ್ರಾಮದ ಶ್ರೀಮತಿ ಮಲ್ಲವ್ವ ಹಬ್ಬಿ ಅವರು ಹನುಮಯ್ಯ ಎಂಬ ಸಾಕಿದ ಎತ್ತು ಅತಿ ಹೆಚ್ಚಿನ ದುಬಾರಿ ದರದಲ್ಲಿ ಮಾರಾಟವಾಗಿ ಗ್ರಾಮದಲ್ಲಿ ಜನರಲ್ಲಿ ಅಚ್ಚರಿ ಮೂಡಿಸಿತ್ತು ಮೂಲತಃ ತೋನಶ್ಯಾಳ ಗ್ರಾಮದ ಆರು ಹಲ್ಲಿನ ಹೋರಿಯನ್ನು ಒಂದು ವರ್ಷದಲ್ಲಿದ್ದಾಗ 35 ಸಾವಿರಕ್ಕೆ ಬಳೂತಿ ಗ್ರಾಮದ ಪುಂಡಲೀಕ ಹೆಬ್ಬಿಯವರು ಖರೀದಿಸಿ, ತಂದು ಸಾಕಿ ಸಲುಗಿಸಿ, ಹಲವಾರು ಎತ್ತಿನ ಬಂಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಬಹುಮಾನ ಪಡೆದು ಸುತ್ತಮುತ್ತಲಿನ ಗ್ರಾಮದಲ್ಲಿ ಹೆಸರು ಖ್ಯಾತಿಯಾಗಿತ್ತು ಅಂದು ತಂದು ಸಾಕಿ ಸೊಲುಗಿದ ಎತ್ತು ಇಂದು ಹಲಗಲಿ ಗ್ರಾಮದ ಸಂಗಪ್ಪ ಕಜ್ಜಿ ಡೋಣಿ ಅವರು 3.5 ಲಕ್ಷ ಕ್ಕೆ ಖರೀದಿಸಿ, ಅತಿ ಹೆಚ್ಚಿನ ದರಕ್ಕೆ ಎತ್ತು ಮಾರಾಟವಾಗಿ ಜಿಲ್ಲೆಯಲ್ಲಿ ದಾಖಲೆ ಸೃಷ್ಟಿಸಿದೆ ಎಂದು ಹೇಳಿದರು
ಶ್ರೀಶೈಲ್ ದ್ಯಾಮಣ್ಣವರ, ಶೇಖಪ್ಪ ಮಟ್ಟಿಹಾಳ ಅರವಿಂದ ಮನಗೂಳಿ, ಹಣಮಂತ ಪಡಶೆಟ್ಟಿ ಬಸವರಾಜ ಔರಾಸಂಗ, ಮತ್ತಿತರು ಉಪಸ್ಥಿತರಿದ್ದರು.
