ಉದಯವಾಹಿನಿ, ತಾಳಿಕೋಟಿ: ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಇದರ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ದಸ್ತಗೀರ ಮಾಸೂಮಸಾಬ ಕೆಂಭಾವಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶನಿವಾರದಂದು ತಮ್ಮ ಅಪಾರ ಬೆಂಬಲಿಗರೊಂದಿಗೆ ಚುನಾವಣಾ ಕಾರ್ಯಾಲಯಕ್ಕೆ ಆಗಮಿಸಿದ ದಸ್ತಗಿರ್ ಕೆಂಭಾವಿ ಅವರು ಸಾಲಗಾರರ ಹಿಂದುಳಿದ ಅ ವರ್ಗಕ್ಕೆ ತಮ್ಮ ನಾಮಪತ್ರವನ್ನು ಸಹಾಯಕ ಚುನಾವಣಾ ಅಧಿಕಾರಿ ವಿ. ಎಸ್. ಸ್ಥಾವರ ಮಠ ಇವರಿಗೆ ಸಲ್ಲಿಸಿದರು. ಈ ಸಮಯದಲ್ಲಿ ಗಣ್ಯರಾದ ಅಬ್ದುಲಗನಿಸಾಬ ಲಾಹೋರಿ. ಎ. ಡಿ. ಎಕೀನ. ಮಾಸೂಮಸಾಬ ಕೆಂಭಾವಿ. ಹಸನ್ ಸಾಬ್ ಮನಗೂಳಿ. ಅಬ್ದುಲ್ ಉತ್ನಾಳ ಶರಣಗೌಡ ಗೋಟಖಂಡಕಿ. ರಾಮಣ್ಣ ಕಟ್ಟಿಮನಿ. ಅಬ್ದುಲ್ ಅಜೀಜ ಕೆಂಭಾವಿ. ಖಾಜಾಹುಸೇನ ಕೆಂಭಾವಿ. ಮುನ್ನ ಅರ್ಜುನಗಿ ಮೆಹಬೂಬ್ ಕೆಂಭಾವಿ ಮೊಹಮ್ಮದ್ ಕೆಂಭಾವಿ. ಹೈದರಶಾ ಮಕಾನದಾರ. ರಿಯಾಜ್ ಡೋಣಿ ಮತ್ತೀತರರು ಇದ್ದರು
