
ಉದಯವಾಹಿನಿ, ಹೊಸಕೋಟೆ: ನಾವೆಲ್ಲರೂ ಆರೋಗ್ಯಕರವಾಗಿರಲು ತಾಜಾ ಹಣ್ಣುಗಳನ್ನು ಸೇವಿಸಬೇಕು ಎಂದು ರೈನ್ ಬೋ ಇನ್ನೊವೇಟ್ ಅಕಾಡೆಮಿ ಶಾಲೆಯ ಸಂಸ್ಥಾಪಕರಾದ ವರಲಕ್ಷ್ಮಿ.ಬಿ.ಎಸ್ ರವರು ತಿಳಿಸಿದರು.ಹೊಸಕೋಟೆ ಸಮೀಪದ ರೈನ್ ಬೋ ಇನ್ನೋವೇಟ್ ಅಕಾಡೆಮಿ ಶಾಲೆ ಬೂದಿಗೆರೆ ಕ್ರಾಸ್ ಇಲ್ಲಿ ನಡೆದ ಹಣ್ಣುಗಳ ದಿನದ ಕಾರ್ಯಕ್ರಮದ ಜೊತೆಗೆ ಪ್ಯಾನ್ಸಿ ಡ್ರಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹಣ್ಣುಗಳ ದಿನದ ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳು ಸಂತೋಷ ಮತ್ತು ಸಂಭ್ರಮದ ಕ್ಷಣವನ್ನು ಆನಂದಿಸಿದರು. ಜಂಕ್ ಫುಡ್‌ಗಿಂತ ಹಣ್ಣುಗಳು ಉತ್ತಮ ಎಂಬ ಸಕಾರಾತ್ಮಕ ಸಂದೇಶದೊಂದಿಗೆ ಕಾರ್ಯಕ್ರಮವು ಮೂಡಿ ಬಂದಿತು. ಮುಖ್ಯವಾಗಿ ಹಣ್ಣುಗಳ ಮಹತ್ವ ಹಾಗೂ ಉಪಯೋಗಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.ಈ ಕಾರ್ಯಕ್ರಮದಲ್ಲಿ ಉತ್ತಮವಾಗಿ ಹಣ್ಣುಗಳ ಉಡುಪನ್ನು ಧರಿಸಿ ಬಂದ ಮಕ್ಕಳಲ್ಲಿ, ಅತ್ಯುತ್ತಮ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು. ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲು ಸಹಕರಿಸಿದ ಪೋಷಕರು ಹಾಗೂ ಶಿಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದರು.ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕರಾದ ವರಲಕ್ಷ್ಮಿ.ಬಿ.ಎಸ್ ಸೇರಿದಂತೆ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
