
ಉದಯವಾಹಿನಿ,ಚಿಂಚೋಳಿ: ಕಾಂಗ್ರೆಸ್ ಪಕ್ಷವು ಹಿಂದೂ ವಿರೋಧಿ,ದಲಿತ ವಿರೋಧಿ,ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಮೂಲ ಖಾತೆ ಸಹ ಸಚಿವ ಭಗವಂತ ಖೂಬಾ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.ಪಟ್ಟಣದ ಹೊರವಲಯದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ನಾಲ್ಕು ತಿಂಗಳು ಆಗುತ್ತಿದ್ದು ಆದರೆ ಹಿಂದೂ ವಿರೋಧಿ ಹೇಳಿಕೆಗಳು ನೀಡುತ್ತಿದ್ದು,ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆಯಲ್ಲಿ ರೈತರಿಗೆ ಕೇಂದ್ರದಿಂದ 6ಸಾವಿರ ನೀಡಿದರೆ ರಾಜ್ಯ ಸರ್ಕಾರ 4ಸಾವಿರ ಬಿಜೆಪಿ ಸರ್ಕಾರದಲ್ಲಿ ಕೊಡುತ್ತಿದ್ದು ಕಾಂಗ್ರೆಸ್ ಸರ್ಕಾರ ನಿಲ್ಲಿಸಿ,ರೈತ ವಿಧ್ಯಾನಿಧಿ ಯೋಜನೆ ಸಹ ನಿಲ್ಲಿಸಿ ರೈತ ವಿರೋಧಿ ಅನುಸರಿಸುತ್ತಿದೆ,ರಾಜ್ಯ ಸರ್ಕಾರ ಸಚಿವರು ದಲಿತರ ಮೇಲೆ ದಬ್ಬಾಳಿಕೆ ಮಾಡಿದರು ಸಿಎಂ ಯಾವುದೇ ಕ್ರಮಕೈಗೊಂಡಿಲ್ಲ ದಲಿತ ವಿರೋಧಿ ಅನುಸರಿಸುತ್ತಿದೆ.
ರಾಜ್ಯ ಸರ್ಕಾರವು ಗ್ಯಾರಂಟಿಗಳ ನೆಪವೊಡ್ಡಿ ರಾಜ್ಯವು ದಿವಾಳಿ ಮಾಡುತ್ತಿದ್ದು ಯಾವುದೇ ಅಭಿವೃದ್ಧಿ ಕಾರ್ಯಗಳು ಕೈಗೋಳ್ಳುತ್ತಿಲ್ಲಾ, ಈಗ ಬರಗಾಲ ಘೋಷಣೆ ಮಾಡಿ ಕೇಂದ್ರ ಸರ್ಕಾರ ಕಡೆ ಬೋಟ್ಟು ತೋರಿಸುವುದು ಬಿಟ್ಟು ರಾಜ್ಯ ಸರ್ಕಾರದಿಂದ ಪ್ರತಿ ಹೇಕ್ಟರ್ ರೈತನಿಗೆ 50ಸಾವಿರ ರೂಪಾಯಿ ಪರಿಹಾರ ನೀಡಬೇಕು. ಸೆ.9-10ರಂದು ಡಿಲ್ಲಿಯಲ್ಲಿ ಯೋಜಿಸಿದ ಜಿ-20 ಕಾರ್ಯಕ್ರಮ ವಿಶ್ವದಾದ್ಯಂತ ಭಾರತ ದೇಶ ಹೆಸರುವಾಸಿಯಾಗಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ವಿದೇಶದ ಅಧ್ಯಕ್ಷರು,ಪ್ರಧಾನಮಂತ್ರಿಗಳು ಹೊಗಳುತಿದ್ದಾರೆ. 1.57ಕೋಟಿ ಯುವಕರು ಯುವತಿಯರಿಗೆ ಉದ್ಯೋಗ ಸೃಷ್ಟಿಯಾಗಿದ್ದು,80ಲಕ್ಷ ಜನರು ಮುದ್ರಾ ಯೋಜನೆ ಸದುಪಯೋಗ ಪಡೆದುಕೊಂಡಿದ್ದಾರೆ,ಪಟ್ಟಣಕ್ಕೆ 14-15ನೇ ಹಣಕಾಸು ಯೋಜನೆಯಲ್ಲಿ 30ಕೋಟಿ ಅನುದಾನ ನೀಡಲಾಗಿದ್ದು,ಗ್ರಾಪಂ ಮಟ್ಟದಲ್ಲಿ 14-15ನೇ ಹಣಕಾಸು ಯೋಜನೆಗೆ 45ಕೋಟಿ ಅನುದಾನ ಒದಗಿಸಲಾಗಿದೆ,ಸಿಆರ್ ಎಫ್ ಯೋಜನೆ ಮೂಲಕ ರಸ್ತೆ ಅಭಿವೃದ್ಧಿಗೆ 38ಕೋಟಿ ರೂಪಾಯಿ ಕಾಮಗಾರಿ ಮಾಡಲಾಗಿದೆ,ಚಿಂಚೋಳಿ ಪುಣ್ಯಕ್ಷೇತ್ರಕ್ಕೆ 3.25ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ,ಅತಿವೃಷ್ಟಿ ಅನಾವೃಷ್ಠಿಗೆ 20ಕೋಟಿ ರೂಪಾಯಿ ನೀಡಲಾಗಿದೆ,ಆರೋಗ್ಯ ವಿಮೆ ಕಾರ್ಡ್ ವನ್ನು 157623ಜನರಿಗೆ ವಿತರಣೆ ಮಾಡಲಾಗಿದೆ,ಜೆಜೆಎಂ ಯೋಜನೆಯಲ್ಲಿ 109ಕೋಟಿ ರೂಪಾಯಿಯಲ್ಲಿ 169ಕಾಮಗಾರಿಗಳು ಆಗಿವೆ,ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯಡಿಯಲ್ಲಿ 33ಕೋಟಿ ರೂಪಾಯಿ ನೀಡಲಾಗಿದೆ,ಪ್ರಧಾನ ಮಂತ್ರಿ ಸಮ್ಮಾನನಿಧಿ ಯೋಜನೆ ಯಡಿಯಲ್ಲಿ 6ಸಾವಿರದಂತೆ 90ಕೋಟಿ ರೂಪಾಯಿ ನೀಡಿದ್ದೇವೆ,ಐನಾಪೂರ ಏತ ನೀರಾವರಿ ಯೋಜನೆಯು ಬಿಜೆಪಿ ಸರ್ಕಾರದಲ್ಲಿ ಅನುಮೋದನೆ ದೊರಕಿತು ಆದರೆ ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ,ಅಶೋಕ ಪಾಟೀಲ,ಗೋಪಾಲರಾವ ಕಟ್ಟಿಮನಿ,ಕೆಎಂ ಬಾರಿ,ಗೌತಮ್ ವೈಜೀನಾಥ ಪಾಟೀಲ,ಮೋತಿರಾಮ ರಾಠೋಡ್,ಭೀಮಶೇಟ್ಟಿ ಮುರುಡಾ,ಸತೀಶರೆಡ್ಡಿ ತಾದಲಾಪೂರ,ಅನೇಕರಿದ್ದರು.
