
ಉದಯವಾಹಿನಿ, ಸಿಂಧನೂರು: 1974 ರಲ್ಲಿ ದೇವರಾಜ ಅರಸು ತಂದ ಭೂ ಸುಧಾರಣೆ ಕಾಯ್ದೆಯು ಹೇಗೆ ಭೂಮಾಲೀಕರ ರಕ್ಷಣೆ ಮಾಡಿದೆ ಎಂದು ತೋರಿಸಲು ಸಿಂಧನೂರು ಹಾಗೂ ಸುಲ್ತಾನಪುರಗಳ ಹೆಚ್ಚುವರಿ ಭೂ ಪ್ರಕರಣಗಳು ಸುಪ್ರೀಮ್ ಸಾಕ್ಷಿಯಾಗಿವೆ.ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಸಿಪಿಐ ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯರಾದ ಎಂ ಗಂಗಾಧರ್ ಅವರ ಸಿಂಧನೂರು ಸ.ನಂ. 419, 32 ಎಕರೆ 12 ಗುಂಟೆ ಹಾಗೂ ಸುಲ್ತಾನಪುರ ಸ.ನಂ.186, 29 ಎಕರೆ 31 ಗುಂಟೆ ಜಮೀನುಗಳು 1981 ರಲ್ಲಿ ಹೆಚ್ಚುವರಿ ಭೂಮಿ ಎಂದು ಘೋಷಣೆ ಮಾಡಲಾಗಿದೆ.ಅಲ್ಲದೆ, ಸದರಿ ಜಮೀನನ್ನು ತಹಸೀಲ್ದಾರರು ವಶಕ್ಕೆ/ಕಬ್ಜಕ್ಕೆ ತೆಗೆದುಕೊಂಡ ನಡುವಳಿಗಳಿವೆ. ಸರಕಾರದ ಕಬ್ಜ ಕಾಗದಕ್ಕೆ ಸೀಮಿತವಾಗಿದೆ. ಆದರೆ, ಸದರಿ ಭೂಮಿಯ ಸಾಗುವಳಿಯನ್ನು ಮಾಜಿ ಭೂಮಾಲೀಕರಾದ ನಾಡಗೌಡ ಕುಟುಂಬದವರು ಮಾಡುತ್ತಿದ್ದಾರೆ. ಇದು ಕಾನೂನ ಬಾಹೀರ ಕಬ್ಜವಾಗಿದೆ ಎಂದು ಆರೋಪಿಸಿದರು.ಅಕ್ರಮ ಸಗುವಳಿದಾರರಾದ ರಾಜಶೇಕರ ನಾಡಗೌಡ ಇವರ ಮೇಲೆ ಹಾಗೂ ಇತರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಹಾಗೂ ಸದರಿ ಭೂಮಿಯನ್ನು ಕೂಡಲೆ ಭೂರಹಿತ ಅರ್ಜಿದಾರರ ಸಾಗುವಳಿಗೆ ಮಂಜೂರಿ ಮಾಡುವಂತೆ ನಾವು ಹೋರಾಟ ಆರಂಭಿಸಿದ್ದೇವೆ. ದಿ. 24.08.2023 ರಂದು ಧರಣಿ ನಡೆಯಿಸಿ ಒತ್ತಾಯ ಪತ್ರ ನೀಡಿದ್ದೇವೆ. ನಾವು ಸದರಿ ಭೂಮಿಯ ಸಾಗುವಳಿಗೆ ಮುಂದಾಗಿದ್ದೇವೆ.ನಮ್ಮ ಸಾಗುವಳಿಯನ್ನು ನಿಲ್ಲಿಸಿದ ತಹಸೀಲ್ದಾರ ದೇಸಾಯಿಯವರು ಜಿಲ್ಲಾಧಿಕಾರಿಗಳ ಆದೇಶ ಬರುವವರಿಗೆ ಯಾರೂ ಸದರಿ ಭೂಮಿಯಲ್ಲಿ ಹೋಗಬಾರದೆಂದು ಅಡ್ಡಿ ಪಡಿಸಿದ್ದಾರೆ.ಇನ್ನೊಂದಡೆ ನಾಡಗೌಡರಿಗೆ ಸ.ನಂ. 419 ರಲ್ಲಿ ಸಾಗುವಳಿ ಮಾಡಲು ಬೆಂಬಲಿಸುತ್ತಿದ್ದಾರೆ.
ತಹಸಿಲ್ದಾರರ ಈ ಭೂಮಾಲೀಕರ ಪರ ಹಾಗೂ ಭೂಸುಧಾರಣೆ ಕಾಯ್ದೆಗೆ ವಿರುದ್ದವಾದ ಈ ನಡೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಅಲ್ಲದೆ, ಸಿಂಧನೂರು ತಹಸೀಲ್ದಾರರು ಪತ್ರ ಬರೆದು ಒಂದು ತಿಂಗಳಾದರೂ ಯಾರು ಕಬ್ಜದಲ್ಲಿರಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿಲ್ಲ. ಏಕೆ? ಎಂದು ಹೇಳಿದರು. ತಹಸೀಲ್ದಾರ ಹಾಗೂ ಜಿಲ್ಲಾಡಳಿತ ನೌಡಗೌಡರ ರಕ್ಷಣೆಗೆ ನಿಂತಿದ್ದು ಇಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ತಾಲೂಕ ಆಡಳಿತ ಹೊಸ ನಾಟಕ ಶುರು ಮಾಡಿದೆ. ಸದರಿ ಭೂಮಿಗಳ ಮರು ವಿಚಾರಣೆಗೆ ಹೈಕೋರ್ಟ್ ಆದೇಶವಿದೆ ಎಂಬುದೆ ಆ ನಾಟಕ. ಹೈಕೋರ್ಟ್ ಆದೇಶದ ಬಗ್ಗೆ ನಮಗೆ ಸಂದೇಹವಿದೆ. ಅಲ್ಲದೆ 39 ವರ್ಷಗಳಿಂದ ಅಂದರೆ, 1984 ರಿಂದ ಇಲ್ಲಿಯವರೆಗೆ ಭೂ ನ್ಯಾಯ ಮಂಡಳಿ ಮಾಡಿದ್ದೇನು? ಮರುವಿಚಾರಣೆಗೆ 39 ವರ್ಷಗಳು ಬೇಕೆ? ಎಂದು ಆಗ್ರಹಿಸಿದರು.
ಒಟ್ಟಾರೆ ಭೂ ಸುಧಾರಣೆ ಕಾಯ್ದೆಯನ್ನು ಬುಡಮೇಲು ಮಾಡಲಾಗಿದೆ. ಸಿದ್ದಲಿಂಗಮ್ಮ ಗಂ.ವೆಂಕಟರಾವ್ ನಾಡಗೌಡರ ಹೆಸರಲ್ಲಿದ್ದು ಹೆಚ್ಚುವರಿಯಾದ 1164 ಎಕರೆ ಹೆಚ್ಚುವರಿ ಭೂಮಿ ಹಂಚಿದ್ಯಾರಿಗೆ ಎಂದು ಕೇಳಿದರೆ ತಾಲೂಕ ಆಡಳಿತ ಕೋಮಕ್ಕೆ ಜಾರಿದೆ. ಹಾಗಾಗಿ, ಕೂಡಲೆ ನಾಡಗೌಡರ ಅಕ್ರಮ ಸಗುವಳಿಗೆ ನೀಡುತ್ತಿರುವ ಸರಕಾರಿ ರಕ್ಷಣೆಯನ್ನು ನಿಲ್ಲಿಸ ಬೇಕು. ಭೂರಹಿತರಾದ ನಮ್ಮ ಸಾಗುವಳಿಗೆ ಅಡ್ಡಿಪಡಿಸಬಾರದೆಂದು ಸರಕಾರಕ್ಕೆ ಒತ್ತಾಯಿಸುತ್ತೇವೆ. ಎರಡನೇ ಹಂತದ ಭೂ ಸ್ವಾಧೀನ ಹೋರಾಟವು ನಮ್ಮ ಮುಂದಿನ ನಿರ್ಧಾರವಾಗಿದೆ. ಎಂದರು. ಈ ಸಂದರ್ಭದಲ್ಲ.ಮಾಬುಸಾಬ ಬೆಳ್ಳಟ್ಟಿ.ಸಂತೋಷ.ಅಂಬಮ್ಮ ಹನುಮಂತಪ್ಪ ಗೋಡ್ಯಾಳ, ತಾಲೂಕು ಉಪಾಧ್ಯಕ್ಷರು ಕೆಆರ್ ಎಸ್, ಹಂಪಮ್ಮ ಹನುಮನಗರ ಕ್ಯಾಂಪ್, ಹೆಚ್.ಆರ್.ಹೊಸಮನಿ, ತಿರುಪತಿ ಮಸ್ಕಿ, ಹುಲುಗಪ್ಪ ಬಳ್ಳಾರಿ ಉಪಸ್ಥಿತರಿದ್ದರು.
