ಉದಯವಾಹಿನಿ, ಯಾದಗಿರಿ: ಇಂದು ಮುಂಜಾನೆ ಟ್ರಕ್ ಹರಿದು 25 ಕುರಿಗಳು ಸಾವನ್ನಪ್ಪಿರೋ ಘಟನೆ ಯಾದಗಿರಿಯ ಚಿತ್ತಾಪುರ ರಸ್ತೆಯಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ಚಿತ್ತಾಪುರ ರಸ್ತೆಯಲ್ಲಿ ಕುರಿಗಳನ್ನು ಮೇಯಿಸೋದಕ್ಕೆ ರಸ್ತೆ ದಾಟಿಸುತ್ತಿದ್ದ ವೇಳೆಯಲ್ಲಿ, ಏಕಾಏಕಿ ಯಮಸ್ವರೂಪಿಯಾಗಿ ಬಂದ ಟ್ರಕ್ ಒಂದು ಕುರಿಗಳ ಮೇಲೆ ಹರಿದಿದೆ. ಈ ಪರಿಣಾಮ 25 ಕುರಿಗಳು ಸಾವನ್ನಪ್ಪಿವೆ. ನಾಗಪ್ಪ, ಧರ್ಮರಾಜ, ಅಂಬಲಯ್ಯ ಹಾಗೂ ನಿಂಗಪ್ಪ ಎಂಬುವವರಿಗೆ ಸೇರಿದ ಕುರಿಗಳಾಗಿದ್ದವು. ಇಂದು ಬೆಳಗ್ಗೆ 5 ಗಂಟೆಯ ಸುಮಾರಿಗೆ ಯಾದಗಿರಿ ಹೊರವಲಯದ ಚಿತ್ತಾಪುರ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಕುರಿಗಳ ಸಾವಿಗೆ ಕಾರಣವಾದ ಟ್ರಕ್ ಚಾಲಕನನ್ನು ಯಾದಗಿರಿ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ಸಂಂಬಧ ಯಾದಗಿರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *

error: Content is protected !!