ಉದಯವಾಹಿನಿ, ನಾಗಮಂಗಲ: ಪ್ರತಿಯೊಂದು ರಾಷ್ಟ್ರದ ಪ್ರಗತಿಯು ಆ ದೇಶದ ಶಿಕ್ಷಕರ ಜ್ಞಾನ ಮತ್ತು ಪ್ರಬುದ್ಧತೆಯ ಮೇಲೆ ನಿರ್ಧರಿಸಲ್ಪಡುತ್ತದೆ ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ನುಡಿದರು.ಅವರು ತಾಲ್ಲೂಕಿನ ಬಿಜಿ ನಗರದ ಬಿಜಿಎಸ್ ಸಭಾಂಗಣದಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯ ಆಯೋಜಿಸಿದ್ದ “ಬೆಳಕು” ಶಿಕ್ಷಕರ ದಿನಾಚರಣೆಯ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ವಿಶ್ವದಲ್ಲಿ ಮಾನವ ದೇಹವು ಮೂರು ಆಯಾಮಗಳಿಂದ ಸುತ್ತುವರಿದಿದೆ, ಅಸ್ತಿತ್ವಕ್ಕೆ ಕಾರಣವಾದ ಬುದ್ಧಿ ಮನಸ್ಸು ಮತ್ತು ಅಹಂಗಳಿಂದ ಜ್ಞಾನೋದಯ ಹೊಂದುವುದೇ  ಪ್ರಬುದ್ಧತೆ ಎಂದು 2500 ವರ್ಷಗಳ ಹಿಂದೆಯೇ ಜಗತ್ತಿಗೆ ತಿಳಿಸಿದ ಗೌತಮ ಬುದ್ಧನು ಶ್ರೇಷ್ಠ ಗುರು ಸ್ಥಾನದಲ್ಲಿ ನಿಂತರೆ, ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ಇಚ್ಚಿಸಿದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರಂತಹ ಮಹಾನ್ ದಾರ್ಶನಿಕರು ಜ್ಞಾನದ ಮೇರು ಪಂಕ್ತಿಗೆ ಸೇರುತ್ತಾರೆ. ಇವರ ಆದರ್ಶ ಗುಣಗಳನ್ನು ಪಾಲಿಸುತ್ತಾ, ವ್ಯಕ್ತಿತ್ವ ವಿಕಸನದ ಸನ್ಮಾರ್ಗದಲ್ಲಿ ಮುನ್ನಡೆದು ಸರ್ವ ಗುರು ವೃಂದಕ್ಕೆ ಗೌರವ ನಮನ ಸಲ್ಲಿಸೋಣ ಎಂದು ಹಾರೈಸಿದರು.ಸಾಂಸ್ಥಿಕ ಕಾಲೇಜುಗಳ ಪ್ರಾಧ್ಯಾಪಕರಾದ ಡಾ. ತೇಜಸ್ವಿ ಎಚ್ ಎಲ್,  ಎ ಹೆಚ್ ಗೋಪಾಲ್, ಶೋಭಾ ಕೆ ಆರ್, ಡಾ. ತಮ್ಮಣ್ಣ ಗೌಡ, ಪ್ರಭಾವತಿ ಕೆ, ಪ್ರಕಾಶ್ ಹೆಚ್ ವಿ, ಡಾ. ರಾಜೇಶ್ ವಿ, ಕಾವ್ಯಶ್ರೀ, ಅನಲಾ ಟ್ಯಾಗೋರ್, ಶ್ವೇತ ಎ ಸಿ ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ, ಸಂಶೋಧನೆಗಾಗಿ ಡಾ. ಅಮಿತಾ, ನಿವೃತ್ತ ಪ್ರಾಧ್ಯಾಪಕ ಶಂಕರಲಿಂಗೇಗೌಡ, ವಿಜಯ ಕುಮಾರ, ಡಾ. ವಿಜಯಲಕ್ಷ್ಮಿ ಹಾಗೂ  ಶಿಕ್ಷಣ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ತಾಲ್ಲೂಕಿನ ಎಂ ಹೊಸೂರು ಸರ್ಕಾರಿ ಶಾಲಾ ಶಿಕ್ಷಕ ಜಿ. ಪ್ರಶಾಂತ್ ರವರನ್ನು ಈ ವೇದಿಕೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಆದಿಚುಂಚನಗಿರಿವಿಶ್ವವಿದ್ಯಾಲಯ ಉಪಕುಲಪತಿ ಡಾ ಎಂ ಎ ಶೇಖರ್ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಶಿಕ್ಷಕರ ದಿನಾಚರಣೆಯ ಮಹತ್ವ ಮತ್ತು ವಿಶ್ವವಿದ್ಯಾಲಯದ ಕ್ಷೇತ್ರ ಕಾರ್ಯದ ವೈವಿಧ್ಯತೆಯನ್ನು ವಿವರಿಸಿದರು.ಸಭಾ ಪೂರ್ವದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಸೌರಭ, ಕ್ರೀಡಾ ವಿಜೇತ ಕಾಲೇಜು ಹಾಗೂ ಶಿಕ್ಷಕರಿಗೆ ಬಹುಮಾನ ವಿತರಣೆ ಸಾಕಾರಗೊಂಡಿತು.ಕಾರ್ಯಕ್ರಮದಲ್ಲಿ ರಿಜಿಸ್ಟ್ರಾರ್ ಡಾ. ಸಿ ಕೆ ಸುಬ್ಬರಾಯ, ಶೈಕ್ಷಣಿಕ ಮುಖ್ಯಸ್ಥರಾದ ಡಾ. ಬಿ ರಮೇಶ್, ಆಡಳಿತ ಮತ್ತು ಶೈಕ್ಷಣಿಕ ಸಲಹೆಗಾರ ಡಾ. ಈ ಎಸ್ ಚಕ್ರವರ್ತಿ, ಸಾಂಸ್ಥಿಕ ಕಾಲೇಜುಗಳ ಪ್ರಾಂಶುಪಾಲರುಗಳಾದ ಡಾ .ಬಿ ಕೆ ನರೇಂದ್ರ, ಡಾ. ಎಂ ಜಿ ಶಿವರಾಮು, ಡಾ. ಎ ಟಿ ಶಿವರಾಮು, ಡಾ. ಪ್ರಶಾಂತ್ ಕೆ, ಪ್ರೊ. ಎನ್ ರಾಮು, ಪ್ರೊ. ಚಂದ್ರಶೇಖರ್, ಡಾ. ಭಾರತಿರಮೇಶ್, ವಿ ಪುಟ್ಟಸ್ವಾಮಿ, ಟಿ ಎನ್ ಶಿಲ್ಪಾ, ಆಸ್ಪತ್ರೆ ನಿರ್ದೇಶಕ ಡಾ. ಶಿವಕುಮಾರ್, ಹಣಕಾಸು ಅಧಿಕಾರಿ ಬಿ ಕೆ ಉಮೇಶ್ ಹಾಗೂ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!