ಉದಯವಾಹಿನಿ, ಮನಿಲಾ : ದಕ್ಷಿಣ ಚೀನಾ ಮಹಾಸಾಗರದಲ್ಲಿ ನೆರೆಯ ರಾಷ್ಟ್ರಗಳಿಗೆ ತೊಂದರೆ ನೀಡುತ್ತಿರುವ ಚೀನಾಗೆ ಇದೀಗ ಫಿಲಿಪ್ಪೀನ್ಸ್ ತಿರುಗೇಟು ನೀಡಿದೆ. ಮೀನುಗಾರಿಕಾ ಬೋಟ್‌ಗಳು ದಕ್ಷಿಣ ಚೀನಾ ಸಮುದ್ರದಲ್ಲಿ ವಿವಾದಿತ ಪ್ರದೇಶಕ್ಕೆ ಪ್ರವೇಶಿಸುವುದನ್ನು ತಡೆಯಲು ಚೀನಾ ಹಾಕಿದ್ದ ತೇಲುವ ತಡೆಗೋಡೆಯನ್ನು ಇದೀಗ ಫಿಲಿಪ್ಪೀನ್ಸ್ ತೆರವುಗೊಳಿಸಿದೆ. ಈ ಮೂಲಕ ಚೀನಾಗೆ ತಕ್ಕ ಎದಿರೇಟು ನೀಡಿದೆ.
ಇಡೀ ದಕ್ಷಿಣ ಚೀನಾ ಮಹಾಸಾಗರವೇ ತನ್ನದೆಂದು ವಾದಿಸುವ ಚೀನಾ, ತನ್ನ ನೆರೆ ಹೊರೆಯ ದೇಶಗಳಿಗೆ ಕೀಟಲೆ ನೀಡುತ್ತಲೇ ಬಂದಿದೆ. ಅಲ್ಲದೆ ಚೀನಾ ಮಹಾಸಾಗರಕ್ಕೆ ಪ್ರವೇಶಿಸುವ ಮೀನುಗಾರಿಕೆ ಸೇರಿದಂತೆ ಇತರೆ ಬೋಟ್‌ಗಳಿಗೆ ಹಾನಿ ಮಾಡುವ ಪ್ರಕ್ರಿಯೆಯನ್ನು ಕೂಡ ಮುಂದುವರೆಸಿದೆ. ಅದರಲ್ಲೂ ಮುಖ್ಯವಾಗಿ ಚೀನಾವು ದಕ್ಷಿಣ ಚೀನಾ ಸಮುದ್ರದ ೯೦ಕ್ಕಿಂತ ಹೆಚ್ಚು ಪ್ರತಿಶತ ಹಕ್ಕು ಸಾಧಿಸಿದ್ದು, ೨೦೧೨ ರಲ್ಲಿ ಶೋಲ್ ಅನ್ನು ಕೂಡ ವಶಪಡಿಸಿಕೊಂಡಿತ್ತು. ಚೀನಾದ ಈ ಕುಟಿಲ ನೀತಿಯಿಂದ ಫಿಲಿಪ್ಪೀನ್ಸ್ ಸೇರಿದಂತೆ ನೆರೆಯ ದೇಶಗಳು ಕೂಡ ತನ್ನ ವ್ಯಾಪ್ತಿಯ ಪ್ರದೇಶದಲ್ಲೂ ಸಮರ್ಪಕ ರೀತಿಯಲ್ಲಿ ಮೀನುಗಾರಿಕೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ.

Leave a Reply

Your email address will not be published. Required fields are marked *

error: Content is protected !!