ಉದಯವಾಹಿನಿ, ಕೋಲಾರ : ಊಳುವವನಿಗೆ ಭೂಮಿ ಎಂದು ನಿಯಮವನ್ನು ಜಾರಿ ಮಾಡಿ, ಸಾಗುವಳಿ, ಪಹಣಿ, ಚೀಟಿ ನೀಡಿ, ಕಂದಾಯ ಕಟ್ಟಿಸಿ ಕೊಂಡು ಕಳೆದು ೫೦-೬೦ ವರ್ಷಗಳಿಂದ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದ ರೈತರ ಜಮೀನುಗಳನ್ನು ಅರಣ್ಯ ಇಲಾಖೆಗೆ ಸೇರಿದೆಯೆಂದು ಯಾವೂದೇ ನೋಟಿಸ್ ಜಾರಿ ಮಾಡದೆ ರಾತ್ರೋರಾತ್ರಿ ೩-೪ ಗಂಟೆಯ ವೇಳೆಯಲ್ಲಿ ೧೫-೨೦ ವರ್ಷದ ಮಾವಿನ ಮರಗಳನ್ನು ಕಟಾವು ಮಾಡುವ ಮೂಲಕ ರೈತರ ಮೇಲೆ ದೌರ್ಜನ್ಯದಿಂದ ಒಕ್ಕಲೆಬ್ಬಿಸಿರುವ ವಿರುದ್ದ ಕ್ರಮ ಕೈಗೊಳ್ಳ ಬೇಕೆಂದು ಸಂಸದ ಎಸ್.ಮುನಿಸ್ವಾಮಿ ಆಗ್ರಹ ಪಡೆಸಿದರು, ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಜನತಾ ದರ್ಶನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಸರ್ಕಾರವೇ ಮಂಜೂರು ಮಾಡಿರುವ ಭೂಮಿ, ಸರ್ಕಾರವೇ ನೀಡಿರುವ ದಾಖಲಾತಿಗಳು ಹೇಗೆ ಸ್ವಾಮಿ ಒತ್ತುವರಿಯಾಗುತ್ತದೆ.೫೦-೬೦ ವರ್ಷಗಳಿಂದ ಸ್ವಾವನುಭವದಲ್ಲಿರುವ ಭೂಮಿಯು ಅರಣ್ಯ ಇಲಾಖೆದು ಎಂದು ಹೇಳುತ್ತಾರೆ ಇಷ್ಟು ವರ್ಷಗಳಿಂದ ಏನು ಮಾಡುತ್ತಿದ್ದರೂ ಸ್ವಾಮಿ ಹಠತ್ತನೆ ಇಂದು ಜ್ಞಾಪಕ ಬಂದಿದೇಯಾ ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು.
