
ಉದಯವಾಹಿನಿ, ಬೀದರ್ : ಮನುಷ್ಯನು ತನಗಾದ ನೋವಿಗೆ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದುಕೊಳ್ಳುತ್ತಾನೆ ಆದರೆ ಮೂಕ ಪ್ರಾಣಿಗಳ ಬಗ್ಗೆ ರೈತರು ಮುಂಜಾಗ್ರತೆಯನ್ನು ವಹಿಸಬೇಕು ಮತ್ತು ಪಶುವೈದ್ಯರ ಸಂಪರ್ಕದಲ್ಲಿರಬೇಕು ಜೊತೆಗೆ ಜಾನುವಾರುಗಳ ರಕ್ಷಣೆಗಾಗಿ ಈ ತರಹದ ಶಿಬಿರಗಳು ನಡೆಯಬೇಕು ಇವು ರೈತರಿಗೆ ವರದಾನವಾಗಿ ಪರಿಣಮಿಸುತ್ತವೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ.ನರಸಪ್ಪಾ ಅವರು ಹೇಳಿದರು.ಸೂರ್ಯ ಫೌಂಡೇಶನ್, ಪಶುಪಾಲನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಪಶು ಚಿಕಿತ್ಸಾಲಯ ಧನ್ನೂರ ಎಚ್ ಮತ್ತು ಎ.ಟಿ.ಎನ್ ಬಯೋಫಾರ್ಮ ಪುಣೆ ವತಿಯಿಂದ ಭಾಲ್ಕಿ ತಾಲ್ಲೂಕಿನ ಧನ್ನುರಾ ಗ್ರಾಮದಲ್ಲಿ ಸೇವಾ ಅಭಿಯಾನದ ಪ್ರಯುಕ್ತ ಹಮ್ಮಿಕೊಂಡ ಉಚಿತ ಪಶು ಚಿಕಿತ್ಸಾ ಶಿಬಿರಕ್ಕೆ ಗೋಪೂಜೆ ನೇರವೇರಿಸಿ ಅವರು ಮಾತನಾಡಿದರು.ಪಶು ಚಿಕಿತ್ಸಾ ಶಿಬಿರದಲ್ಲಿ ಧನ್ನುರಾ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರು ತಮ್ಮ ಜಾನುವಾರುಗಳನ್ನು ಕರೆತಂದು ಶಿಬಿರದ ಲಾಭ ಪಡೆದುಕೊಂಡಿರುವುದು ಬಹಳ ಒಳ್ಳೆಯದು ಈ ಶಿಬಿರದಲ್ಲಿ ಪಶುಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಿ ಕಾಲುಬಾಯಿ ರೋಗ, ರೇಬಿಸ್ ರೋಗ ಹಾಗೂ ಗಂಟಲು ಬೇನೆ ಸೇರಿದಂತೆ ಇತರೆ ರೋಗಗಳು ಬಗ್ಗೆ ಮಾಹಿತಿ ನೀಡಿ ಕಾಲು ಬಾಯಿ ರೋಗದ ರೋಗ ನಿರೋಧಕ ಲಸಿಕೆಯನ್ನು ನೀಡುತಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.ಮುಖ್ಯ ಪಶುವೈದ್ಯಾಧಿಕಾರಿ ಡಾ.ಮಹಿಪಾಲಸಿಂಗ್ ಠಾಕುರ್ ಮಾತನಾಡಿ ಪಶುಗಳ ಪಾಲನೆ, ಪೋಷಣೆ ಹಾಗೂ ಸಂರಕ್ಷಣೆ ಹಾಗೂ ಹೈನು ರಾಸುಗಳಿಂದ ಹೆಚ್ಚಿನ ಹಾಲು ಉತ್ಪಾದನೆಯ ಕುರಿತು ಮತ್ತು ರೋಗಗಳ ಬಾರದಂತೆ ಮುಂಜಾಗ್ರತವಾಗಿ ತೆಗೆದುಕೊಳ್ಳಬೆಕಾದ ಕ್ರಮಗಳ ಕುರಿತು ರೈತರಿಗೆ ವಿವರವಾದ ಮಾಹಿತಿಯನ್ನು ನೀಡಿದರು.
ಸೂರ್ಯ ಫೌಂಡೇಶನ್ ಸಂಯೋಜಕರಾದ ಗುರುನಾಥ ರಾಜಗೀರಾ ಅವರು ಮಾತನಾಡಿ ಕಳೆದ ಐದು ವರ್ಷಗಳಿಂದ ಜಿಲ್ಲೆಯಲ್ಲಿ ಪದ್ಮಶ್ರೀ ಪುರಸ್ಕೃತ ಜಯಪ್ರಕಾಶ್ ಅಗ್ರವಾಲ್ ಅವರ ನೇತೃತ್ವದ ಸೂರ್ಯ ಫೌಂಡೇಶನ್ ವತಿಯಿಂದ ಬೀದರ ಜಿಲ್ಲೆಯಲ್ಲಿ ಫೌಂಡೇಶನ್ ಉಪಾಧ್ಯಕ್ಷರಾದ ಅನಂತ ಬಿರಾದಾರ ಅವರ ಮಾರ್ಗದರ್ಶನದಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ, ಕೃಷಿ, ಆರೋಗ್ಯ ಕ್ಷೇತ್ರದಲ್ಲಿ ಸೇವಾ ಚಟುವಟಿಕೆಗಳನ್ನು ಮಾಡುತ್ತಾ ಬರುತ್ತಿದೆ ಪ್ರಸ್ತುತ ಹೈನುಗಾರಿಕೆ ಹೆಚ್ಚಳ ಹಾಗೂ ಜಾನುವಾರಗಳ ಉತ್ತಮವಾಗಿ ಪಾಲನೆ ಪೋಷಣೆ ಮಾಡುವುದರ ಬಗ್ಗೆ ಪಶುವೈದ್ಯರಿಂದ ರೈತರಿಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಈ ಶಿಬಿರ ಆಯೋಜಿಸಲಾಗಿದ್ದು ಈ ಶಿಬಿರದಲ್ಲಿ ಭಾಗವಹಿಸಿದ ರೈತರ ಜಾನುವಾರುಗಳ ಆರೋಗ್ಯ ಹಿತದೃಷ್ಟಿಯಿಂದ ಪುಣೆಯ ಎ.ಟಿ.ಎನ್ ಬಯೋಫಾರ್ಮ ವತಿಯಿಂದ ಉಚಿತವಾಗಿ ಲಸಿಕೆ, ಗುಳಿಗೆ , ಪೌಷ್ಟಿಕ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಕಾಲು ಬಾಯಿ ರೋಗ ಲಸಿಕೆ ವಿತರಣೆ* ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ರೈತರಿಗೆ ಜಾನುವಾರುಗಳಲ್ಲಿ ಕಾಣಿಸುವ ಕಾಲು ಬಾಯಿ ರೋಗಕ್ಕೆ ಮುನ್ನೆಚ್ಚರಿಕೆ ದೃಷ್ಟಿಯಿಂದ ರಾಷ್ಟ್ರೀಯ ಕಾರ್ಯಕ್ರಮದ ನಿಮಿತ್ತ ಎಫ್.ಎಮ್.ಡಿ ಕಾಲು ಬಾಯಿ ರೋಗದ ಮುಂಜಾಗ್ರತೆಯ ಕ್ರಮಗಳು ಮತ್ತು ಎಚ್ಚರಿಕೆಯ ಅಂಶಗಳ ಕುರಿತು ವೈದ್ಯರು ಮಾಹಿತಿ ನೀಡಿದರು ಬಳಿಕ ಎಲ್ಲಾ ಜಾನುವಾರುಗಳಿಗೆ ಉಚಿತ ಕಾಲು ಬಾಯಿ ರೋಗ ಲಸಿಕೆಯನ್ನು ನಿಡಿದರು.
ಈ ಸಂದರ್ಭದಲ್ಲಿ ಎ.ಟಿ.ಎನ್ ಬಯೋಫಾರ್ಮದ ವ್ಯವಸ್ಥಾಪಕ ನಿರ್ದೇಶಕರಾದ ತಾನಾಜಿ ಬಿರಾದಾರ, ಹಾಗೂ ಕರ್ನಾಟಕ ರಾಜ್ಯದ ಮಾರ್ಕೆಟಿಂಗ್ ಪ್ರಮುಖರಾದ ಮನೋಜ ಬಿರಾದಾರ, ಭಾಲ್ಕಿ ಪಶುಚಿಕಿತ್ಸಾಲಯದ ಮುಖ್ಯ ಪಶುವೈದ್ಯಾಧಿಕಾರಿ ಡಾ. ನಾಗರಾಜ ಕಂಗಳೆ, ಸಿಬ್ಬಂದಿಗಳಾದ ಚಂದ್ರಕಾಂತ ಭೋಸ್ಲೆ, ಯುವರಾಜ ಹಾಲಳ್ಳಿ ಮುಖಂಡರಾದ ಶಿವಕುಮಾರ ಬಾವಗೆ, ನಾಗನಾಥ ರಂಜರಿ, ಅಮೃತ ಗಾದಗೆ, ಶಿವಶರಣಪ್ಪಾ ಬಾವಗೆ, ಅನೀಲ ಪಾಟೀಲ, ಉಮಕಾಂತ ಜಮಶೇಟ್ಟಿ, ಸೂರ್ಯ ಫೌಂಡೇಶನ್ ಪ್ರಮುಖರಾದ ರಮೇಶ ಅರಾಳೆ, ಸಂಗಮೇಶ ದಾನಿ, ಸಂಗಮೇಶ ಬಿರಾದಾರ, ಆಕಾಶ ಪಟ್ನೆ, ಸಿದ್ದು ಕಾಡೋದೆ ಸೇರಿದಂತೆ ಇತರರಿದ್ದರು.
