
ಉದಯವಾಹಿನಿ ಸವದತ್ತಿ : ತಾಲೂಕಿನ ಹರ್ಲಾಪೂರ್ ಗ್ರಾಮದಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳ ಡಾll ಶ್ರೀಪಾದ್ ಸಬನೀಸ್ ಅವರ ಮಾರ್ಗದರ್ಶನದಲ್ಲಿ ಆಯುಷ್ಯ ಮಾನಭವ ಆರೋಗ್ಯ ಮೇಳ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಯಿತು ಆಯುಷ್ಯ್ ವೈದ್ಯಾಧಿಕಾರಿಗಳಾದ ಜ್ಯೋತಿ ಬಸರಿ ಅವರು ಆಯುಷ್ಯ ಮಾನಭವ ಆರೋಗ್ಯ ಮೇಳ ಕುರಿತು ಸಾಂಕ್ರಾಮಿಕ ಹಾಗೂ ಅ ಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ಆರೋಗ್ಯದ ಬಗ್ಗೆ ತಿಳುವಳಿಕೆಯ ಬಗ್ಗೆ ತಿಳಿಸಿದರು ಸಿಎಚ್ಓ ನಿಂಗಣ್ಣ ಮಾತನಾಡಿ ರಕ್ತದೊತ್ತಡ ಸಕ್ಕರೆ ಖಾಯಿಲೆ ಮತ್ತು ಕ್ಷಯರೋಗ ದ ಬಗ್ಗೆ ಅರಿವು ಮತ್ತು ಕಫ ಸಂಗ್ರಹಣೆ ಬಗ್ಗೆ ತಿಳಿಸಿದರು ಪಿಡಿಒ ಮಹೇಶ ತೆಲಗಾರ್ , ಶ್ರೀ ಎನ್ ಎ ಪೂಜೇರ , ಆನಂದ್ ಕೆಹೆಚಪಿಟಿ, ಗ್ರಾಮ ಪಂಚಾಯತ್ ಸದಸ್ಯರಾದ ಚನ್ನಮ್ಮ ದಿಡಗಣ್ಣವರ್, ಯಲ್ಲಪ್ಪ ಗಂಟಿ ಊರಿನ ಹಿರಿಯರು, ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
