
ಉದಯವಾಹಿನಿ, ಕೊಲ್ಹಾರ:ತಾಲೂಕಿನ ರೋಣಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳದ ಗೆಣ್ಣೂರು ಗ್ರಾಮದಲ್ಲಿ ಹೆಸರಿಗೆ ಮಾತ್ರ ಶುದ್ಧ ನೀರು ಕುಡಿಯುವ ಘಟಕ ಇದೆ,ಒಳಗಡೆ ನೋಡಿದ್ರೆ ಸಾಮಾನುಗಳು ತುಕ್ಕು ಹಿಡಿದು ಹೋಗಿವೆ.ಸ್ವಚ್ಛತೆ ಇಲ್ಲ ಕಳೆದ 9 ತಿಂಗಳಿಂದ ಶುದ್ಧ ಕುಡಿಯುವ ನೀರಿನ ಘಟಕವು ನೀರು ಪೂರೈಕೆಯಾಗದೇ ಸ್ಥಗಿತಗೊಂಡಿದೆ. ಕುಡಿಯುವ ನೀರಿಗಾಗಿ ಬಾವಿ, ಕೈ ಪಂಪ್,ಬೋರುಗಳಿಗೆ ಹುಡುಕಿಕೊಂಡು ಹೋಗುವ ಜನರ ಅಲೆದಾಟದ ದಿಸಿಯಾಗಿದೆ.ಇದರಿಂದ ಗ್ರಾಮದ ಅರ್ಧ ಭಾಗದ ಜನರಿಗೆ ಮತ್ತ ತೋಟದ ಜನರಿಗೆ ಶುದ್ಧ ಕುಡಿಯುವ ನೀರಿಲ್ಲದೆ ಪರಿತಪಿಸುವಂತಾಗಿದೆ.ಪಕ್ಕದಲ್ಲಿ ಕೃಷ್ಣಾ ನದಿ ಇದ್ದರೂ ಕೂಡ ಈ ಗ್ರಾಮಕ್ಕೆ ಕುಡಿಯುವ ನೀರು ಬಾಗಿ ಇಲ್ಲಾ, ನೀರು ಕಲುಸಿತವಾಗಿ ಬರುವುದರಿಂದ, ಕೆಮ್ಮು, ನೆಗಡಿ,ವಾಂತಿಬೇದಿ ಮತ್ತು ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದ್ದು,ಶೀಘ್ರದಲ್ಲಿ ನೀರಿನ ಘಟಕ ದುರಸ್ತಿಗೊಳಿಸಿ ಶುದ್ಧ ಕುಡಿಯುವ ನೀರನ್ನು ಜನರಿಗೆ ಅನಕೂಲುವಾಗಲು ಒದಗಿಸಬೇಕೆಂದು.
ನೀರಿನ ಘಟಕ ಕೆಟ್ಟು 9 ತಿಂಗಳು ಗತಿಸಿದರು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ಬರಲಿಲ್ಲವೆಂದರೆ ಹೇಗೆ…? ಗ್ರಾಮ ಪಂಚಾಯತಿಯವರಿಗೆ ಕೇಳಿದರೆ ಶುದ್ಧ ಕುಡಿಯುವ ನೀರಿನ ಘಟಕಕ್ಕೂ ಗ್ರಾಮ ಪಂಚಾಯತಿಗೂ ಸಂಬಂಧವಿಲ್ಲಾ. ಘಟಕ ನಿರ್ಮಾಣಕ್ಕೆ ಟೆಂಡರ್ ಕರೆದು ಗುತ್ತಿಗೆದಾರರಿಗೆ ನೀಡಿರುತ್ತಾರೆ. ಏನೆ ಆದರು ಅವರೆ ಅದನ್ನು ರಿಪೇರಿ ಗೊಳಿಸಬೇಕೆಂದು ತಿಳಿಸಿದ್ದಾರೆ.ಕುಡಿಯುವ ನೀರಿನ ಸಮಸ್ಯೆಯಾದಲ್ಲಿ ಇಲಾಖೆ ಅಧಿಕಾರಿಗಳು ಜವಾಬ್ದಾರಿಯಿಂದ ತಕ್ಷಣವೇ ಕೆಲಸ ಮಾಡಬೇಕು. ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟು 9 ತಿಂಗಳು ಗತಿಸಿದರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬರದೆ ಇರುವದು ವಿಪರ್ಯಾಸವಾಗಿದೆ.ಈಗಲಾದರು ಸ೦ಬ೦ಧಿಸಿದ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಶೀಘ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ದೋಸ್ತಿಗೊಳಿಸಬೇಕೆಂದು ಗ್ರಾಮದ ದಲಿತ ಯುವಕರು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.
