
ಉದಯವಾಹಿನಿ, ಇಂಡಿ: ತಾಲೂಕಿನ ಝಳಕಿ ಗ್ರಾಮದ ಹಾಲು ಉತ್ಪಾದಕರ ಸಂಘ ನಿಯಮಿತ ಭತಗುಣಕಿ ಅತಿ ಹೆಚ್ಚು ಹಾಲು ಶೇಖರಣೆ ಮಾಡಿ ಹೆಚ್ಚಿನ ಲಾಭಾಂಶ ಪಡೆದುಕೊಂಡು ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನಪಡದುಕೊಂಡಿದೆ ಎಂದು ವಿಜಯಪುರ ಮತ್ತು ಬಾಗಲಕೋಟ ಹಾಲು ಉತ್ಪಾದಕರ ಒಕ್ಕುದ ವ್ಯವಸ್ಥಾಪಕರಾದ ಡಾ ದಿಕ್ಷಿತಕುಮಾರ 2023-24ನೇ ಸಾಲೀನ ಸರ್ವಸಾಧಾರಣ ಸಭೆಯಲ್ಲಿ ಭತಗುಣಕಿ ಹಾಲು ಉತ್ಪಾಕರ ಸಂಘದ ಅಧ್ಯಕ್ಷರಿಗೆ ಮತ್ತು ಕಾರ್ಯದರ್ಶಿಗಳಿಗೆ ಸನ್ಮಾನಿಸಿ ಆದೇಶ ಹೊರಡಿಸಿದರು.2022-23ನೇ ಸಾಲಿನಲ್ಲಿ ರೈತರಿಂದ ಸುಮಾರು 8,32,500 ಲೀಟರ್ ಶೇಖರಣೆ ಮಾಡಿದ್ದು, ಸಂಘವು ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಸುತ್ತಿದೆ, ಬೆರೆ-ಬೆರೆ ರಾಜ್ಯಗಳಲ್ಲಿ ರೈತರ ಹಾಲಿಗೆ ಹೆಚ್ಚಿನ ದರ ನೀಡಿದ್ದರು, ನಮ್ಮ ಹಿಂದಿನ ಸರ್ಕಾರ ರೈತರ ಹಾಲಿಗೆ ಯಾವುದೇ ರಿತಿಯ ಹೆಚ್ಚಿನದರ ಕೊಡದಿದ್ದ ಸಮಯದಲಿ ಭತಗುಣಕಿ ಹಾಲು ಉತ್ಪಾದಕರ ಸಂಘ ರೈತರ ಆರ್ಥಿಕ ಪರಿಸ್ಥಿ ಸುಧಾರಣೆ ಮತ್ತು ಹಸುಗಳ ಆರೋಗ್ಯ ದೃಷ್ಠಿಯಿಂದ ನಮ್ಮ ಸಂಘದಿoದ ರೈತರಿಗೆ ಪ್ರತಿ ಲೀಟರಿಗೆ 3ರೂ. ಗಳು ಸಂಘದ ಸ್ವಂತ ಲಾಭಾಂಶದಿoದ ವಿತರಿಲಾಗಿದೆ ಎಂದು ಭತಗುಣಕಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ಸಂಬಾಜಿ ಮಿಸಾಳೆ ಈ ಸಂದರ್ಬದಲ್ಲಿ ಮಾತನಾಡಿದರು.ಸಂಘದ ಹಣದಲ್ಲಿ ಸುಮಾರು 300 ಹಸುಗಳಿಗೆ ಉಚಿತ ವಿಮಾ ಸೌಲಭ್ಯ ಮಾಡಿಸಿದ್ದು, ರೈತರು ಯಾವುದೇ ಕಾರಣಕ್ಕು ಖಾಸಗಿ ಹಾಲು ಉತ್ಪಾದಕರ ಮೋರೆ ಹೋಗದಂತೆ ಯೋಜನೆಗಳನ್ನು ರೂಪಿಸಲಾಗಿದೆ, ೪ ತಿಂಗಳು ಸತತವಾಗಿ ರೈತರಿಗೆ ಹೆಚ್ಚಿನ ದರ ನೀಡಿ ಸುಮಾರು 7,20,000/-ರೂ. ಗಳನ್ನು ರೈತರಿಗೆ ಕೊಡಲಾಗಿದೆ, ಇವೆಲ್ಲವು ಸಂಘದ ಉಪಾಧ್ಯಕ್ಷರು, ಎಲ್ಲ ಸದಸ್ಯರ ಒಂದಾಗಿ ನಿರ್ಧಾರ ಮಾಡಿ, ಸಂಘದ ಬೆಳವಣ ಗೆ ಉದ್ದೇಶದಿಂದ ಮಾಡಲಾಗಿದೆ ಎಂದರು.
ಉಪಧ್ಯಕ್ಷರಾದ ಬಸವರಾಜ ಹಳಕೆ, ಕಾರ್ಯ ನಿರ್ವಹಣಾಧಿಕಾರಿ ಸಿದ್ದಾರಾಮ ತಳಕೇರಿ, ಅಪ್ಪಾಸಾಹೇಬ ಪವಾರ, ಶಿವಪುತ್ರ ಜೇವರಗಿ, ಗಂಗಾಧರ ಘಾಟಗೆ, ಶಿವಾಜಿ ಶಿಂಧೆ, ದಶರಥ ಘಾಟಗೆ, ರಹೀಮಸಾಬ ಬಾಗವಾನ, ಬಸವರಾಜ ವಾಘಮೋರೆ, ಲಲಿತಾ ಜಾಧವ, ನಾಗುಬಾಯಿ ಖರಾಡೆ, ಉಪಸ್ಥಿತರಿದ್ದರು.
