
ಉದಯವಾಹಿನಿ,ಕೆಂಭಾವಿ: ಪಟ್ಟಣ ಸಮೀಪದ ಕಾಚಾಪೂರ ಗ್ರಾಮಕ್ಕೆ ಬಸ್ ಗಳನ್ನು ಆರಂಭಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ ಸುರಪುರದ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು,ಮನವಿ ಸಲ್ಲಿಸಿ ಮಾತನಾಡಿದ ಕರವೇ ತಾಲೂಕಾ ವಕ್ತಾರರಾದ ಶ್ರೀಶೈಲ ಕಾಚಾಪೂರ ಸ್ವಾತಂತ್ರ್ಯ ಬಂದನಂತರದಿಂದ ಇಲ್ಲಿಯವರೆಗೂ ಒಂದೇ ಒಂದು ಬಸ್ ನ್ನು ಗ್ರಾಮ ಕಂಡಿಲ್ಲ ಇದರಿಂದ ಗ್ರಾಮಸ್ಥರಿಗೆ ಪ್ರಯಾಣಕ್ಕಾಗಿ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ .ದಿನನಿತ್ಯಗ್ರಾಮದಿಂದ ಶಾಲಾ ಕಾಲೇಜುಗಳಿಗೆ ಹೋಗಬೇಕಾದ ವಿದ್ಯಾರ್ಥಿಗಳ ಪಾಡಂತು ಹೇಳತಿರದು ಶೀಘ್ರವಾಗಿ ಗ್ರಾಮಕ್ಕೆ ಸಾರಿಗೆ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಕೆಂಭಾವಿ ಕರವೇ ವಲಯಾಧ್ಯಕ್ಷರಾದ ಕುಮಾರ ಮೋಪಗಾರ,ಗ್ರಾಮ ಘಟಕದ ಅಧ್ಯಕ್ಷರಾದ ಬಸವರಾಜ ಪುರಾಣ,ಮುಖಂಡರಾದ ಬಲವಂತರಾಯ ನಡುವಿನಮನಿ,ಸಾಹೇಬಗೌಡ ಹಳ್ಳದಮನಿ,ರಮೇಶ ಕೆಳಗಿನಮನಿ,ಶ್ರೀಶೈಲ ಬಿರಾದಾರ,ಸಿದ್ದು ಬಿರಾದಾರ,ಸಂತೋಷ ಕಲ್ಲದೇವನಹಳ್ಳಿ,ಮಲ್ಲಣ್ಣ,ಸೇರಿದಂತೆ ಅನೇಕರಿದ್ದರು.
