
ಉದಯವಾಹಿನಿ,ದೇವದುರ್ಗ: ಸರಕಾರದ ಹಲವು ಯೋಜನೆಗಳು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕಿ ಕರೆಮ್ಮ ಗೋಪಾಲಕೃಷ್ಣ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ 27 ಜನ ಫಲಾನುಭವಿಗಳಿಗೆ ಪಂಪ್‍ಶೆಟ್ ವಿತರಿಸಿ ಅವರು ಮಾತನಾಡಿದರು. ಯೋಜನೆಗಳು ಕುರಿತು ಅಧಿಕಾರಿಗಳು ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ವಿತರಿಸಿದ ಪಂಪ್‍ಶೆಟ್‍ಗಳಿಗೆ ಜೆಸ್ಕಾಂ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಬೇಕು. ಯಾವುದೇ ಕಾರಣಕ್ಕೆ ಫಲಾನುಭವಿಗಳನ್ನು ಕಚೇರಿಗೆ ಅಲೆಯದಂತೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಹೇಳಿದರು. ಆಗುತ್ತಿರುವಂತ ಸಣ್ಣಪುಟ್ಟ ಸಮಸ್ಯೆಗಳು ಕೂಡಲೇ ಬಗ್ಗೆ ಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕ ಸೇವೆ ನೀಡುವ ಕಡೆ ಒತ್ತು ನೀಡಬೇಕು ಎಂದರು. ಫಲಾನುಭವಿಗಳ ತಿಂಗಳಗಟ್ಟಲೇ ಜೆಸ್ಕಾಂ ಕಚೇರಿಗೆ ಅಲೆದಾಡದಂತೆ ಕೊಡಬೇಕಾದಂತ ಸೌಲಭ್ಯ ನಿಗದಿತ ಅವಧಿಯಲ್ಲಿ ಪೂರೈಸಲು ಎಚ್ಚರವಹಿಸಬೇಕು ಎಂದು ಹೇಳಿದರು.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ 2018-19ನೇ ಸಾಲಿನಲ್ಲಿ 19 ಜನ ಫಲಾನುಭವಿಗಳಿಗೆ ಪಂಪ್‍ಶೆಟ್, 2019-20ನೇ ಸಾಲಿನ 3 ಜನ ಫಲಾನುಭವಿಗಳಿಗೆ, 2021 ಸಾಲಿನಲ್ಲಿ 5 ಜನ ಫಲಾನುಭವಿಗಳಿಗೆ ಪಂಪ್‍ಶೆಟ್ ವಿತರಣೆ ಮಾಡಿದರು. ಇಂತಹ ಸೌಲಭ್ಯಗಳು ರೈತರು ಸದುಪಯೋಗ ಪಡೆದುಕೊಳ್ಳಬೇಕು. ಅರ್ಹ ಫಲಾನುಭವಿಗಳಿಗೆ ಬೇಕಾದಂತ ವಿದ್ಯುತ್ ಸಂಪರ್ಕ ನಿಗದಿತ ಅವಧಿಯಲ್ಲಿ ಜೆಸ್ಕಾಂ ಅಧಿಕಾರಿಗಳು ಪೂರೈಸಲು ಕ್ರಮವಹಿಸಬೇಕು. ಯಾವುದೇ ಫಲಾನುಭಗಳಿಂದ ದೂರುಗಳು ಬರದಂತೆ ನಿಟ್ಟಿನಲ್ಲಿ ಎಚ್ಚರವಹಿಸಬೇಕು ಎಂದರು. ಇದೇ ಸಂದರ್ಭದಲ್ಲಿ ನಿಗಮ ಅಧಿಕಾರಿ ಪ್ರಕಾಶ, ಶರಣಪ್ಪ ಬಳೆ, ಶೇಖ ಮುನ್ನಬೈ, ಗೋವಿಂದ ನಾಯಕ, ರೇಣುಕಾ ಮಯೂರಸ್ವಾಮಿ, ಇಸಾಕ್ ಮೇಸ್ತ್ರೀ, ಶಾಲಂ ಉದ್ದಾರ, ದಾವುದು ಹೌಂಟಿ, ಸೇರಿದಂತೆ ಇತರರು ಇದ್ದರು.
