ಉದಯವಾಹಿನಿ,ಸಿಂಧನೂರು: ಸಮಾಜದಲ್ಲಿ ಅತೀ ಉನ್ನತ ಮತ್ತು ಜವಾಬ್ದಾರಿಯುತ ಸ್ಥಾನ ಎಂದರೆ ಶಿಕ್ಷಕರದಾ ಅದು ಪವಿತ್ರವಾದದ್ದು. ಇದಕ್ಕೆ ಬೆಲೆ ಕಟ್ಟಲಾರದಂತ ವೃತ್ತಿ. ಶಿಕ್ಷಕರಾದ ನೀವು ಅರ್ಥ ಮಾಡಿಕೊಂಡು ಶಾಲೆಯಲ್ಲಿನ ವಿದ್ಯಾರ್ಥಿಗಳನ್ನು ನಿಮ್ಮ ಮಕ್ಕಳಂತೆ ನೋಡಿಕೊಳ್ಳಿ ಎಂದು ಶಿಕ್ಷಕರಿಗೆ ಹಂಪನಗೌಡ ಬಾದರ್ಲಿ ಹೇಳಿದರು.ನಗರದ ಸತ್ಯ ಗಾರ್ಡನ್ ನಲ್ಲಿ ನಡೆದ ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರ 136ನೇ ಹಾಗೂ ಅಕ್ಷರ ಮಹಾ ತಾಯಿ ಜ್ಯೋತಿ ಬಾಪುಲೆ ಅವರು ಜನ್ಮದಿನೋತ್ಸವದ ಅಂಗವಾಗಿ 2023-24 ನೇ ಸಾಲಿನ ಸಿಂಧನೂರು ತಾಲ್ಲೂಕು ಮಟ್ಟದ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಬಾದರ್ಲಿ ಅವರು ಸಮಾಜದಲ್ಲಿ ಪ್ರತಿಯೊಂದಕ್ಕೂ ಮತ್ತು ಎಲ್ಲಾ ಕಾರ್ಯಗಳ ಅಭಿವೃದ್ಧಿಗೆ ನಿಮ್ಮ ಶಿಕ್ಷಕರ ಪಾತ್ರ ಮಹತ್ವದ್ದು. ಅಂತಹ ಶಿಕ್ಷಕರಿಗೆ ತರಬೇತಿ ಅವಶ್ಯಕತೆ ಇದೆಯೇ ಎಂದು ಶಿಕ್ಷಕರಿಗೆ ಪ್ರಶ್ನೆ..? ಮಾಡಿದರು. ತಾಲ್ಲೂಕಿನ ಶಾಲೆಗಳಿಗೆ ಸುಮಾರು 16 ಕೋಟಿ ರೂ ಇತರೆ ಮೂಲಭೂತ ಸೌಕರ್ಯಗಳು ಹರಿತು ಅನುದಾನ ಮೀಸಲಿಟ್ಟಿದ್ದೇವೆ. ಈಗಾಗಲೇ 9600 ಶಿಕ್ಷಕರು ವರ್ಗಾವಣೆಯಾಗಿದ್ದನ್ನು ಪರಿಗಣಿಸಿ ಪುನಃ ಅದನ್ನು ಸರಿಪಡಿಸಲು ಕೆಕೆಆರ್ ಡಿಬಿ ಅನುದಾನದಲ್ಲಿ ಅತಿಥಿ ಉಪನ್ಯಾಸಕರ ನೇಮಕ ಮಾಡಿ ಕಲಿಕೆ ವಿದ್ಯಾರ್ಥಿಗಳು ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು ಪ್ರಾಸ್ತಾವಿಕವಾಗಿ ಮಾತನಾಡಿ ಬಿಇಒ ಅವರು ಇಡೀ ವಿಶ್ವಕ್ಕೆ ವಿದ್ಯಾಲಯಗಳು ಕೊಡುಗೆ ಭಾರತ ದೇಶವಾಗಿದೆ. ಇಲ್ಲಿಯೇ ಮೊದಲು ತಂತ್ರಜ್ಞಾನ ಪೂರ್ವಿಕರು ಬಳಸಿದ್ದು ದಾಖಲೆಗಳು ಸಂಗ್ರಹಿಸಲಾಗಿದೆ.ಯಾವುದೇ ದೇಶ ಅಭಿವೃದ್ಧಿ ಹೊಂದಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಮ್ ದೊಡ್ಡ ಬಸವರಾಜ ಕಾರ್ಯಕ್ರಮ ಕುರಿತು ಮಾತನಾಡಿದರು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾದ ಚಂದ್ರಶೇಖರ್ ಹಿರೇಮಠ ಸಾಬಣ್ಣ ವಗ್ಗರ್ ಬಸಲಿಂಗಪ್ಪ ಮಲ್ಲಪ್ಪ ಕೆ. ವಿಠಲ್ ಅಮರಯ್ಯ ಪತ್ರಿಮಠ ಪಿ.ಲಲಿತಾಂಜಲಿ ಕಳಕಪ್ಪ ಗಡಾದ ವೀರೇಶ್ ಅಗ್ನಿ. ರವೀಂದ್ರ ಗೌಡ ಸಂಗಯ್ಯ ಸ್ವಾಮಿ ಮೈನಾ ಪಾಷ ಲಿಂಗನಗೌಡ ಬಸವರಾಜ ಅಂಗಡಿ ಮಂಜುನಾಥ್ ಮಲ್ಲನಗೌಡ ಬಾಲಕೃಷ್ಣ ಜಗದೀಶ್ ಭರತ ಕುಮಾರ ಬಸವರಾಜ ಚಂದ್ರಶೇಖರ್ ಕಗ್ಗೋಡು ಪರಸಪ್ಪ ನಾಗರಾಜ ಹೇರೂರು ವೇದಿಕೆ ಮೇಲೆ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಭಾಜನರಾದ ತಾಲ್ಲೂಕು ಮಟ್ಟದ ಶಿಕ್ಷಕರು ಹಾಗೂ ವಯೋ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಸನ್ಮಾನ ಮಾಡಿ ಗೌರವಿಸಿದರು.

Leave a Reply

Your email address will not be published. Required fields are marked *

error: Content is protected !!