ಉದಯವಾಹಿನಿ, ಮುಂಬೈ : ರೋಟರಿ ಕ್ಲಬ್ ಆಫ್ ಬಾಂಬೆ ವತಿಯಿಂದ ಕೊಡಮಾಡುವ ಪ್ರತಿಷ್ಠಿತ “ನಾಗರಿಕ ಪ್ರಶಸ್ತಿ” ಗೆ ಈ ಬಾರಿ ರಿಲಯನ್ಸ್ ಫೌಂಡೇಶನ್ ಮುಖ್ಯಸ್ಥೆ ನೀತಾ ಅಂಬಾನಿ ಭಾಜನರಾಗಿದ್ದಾರೆ.
“ಆರೋಗ್ಯ, ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿಯಲ್ಲಿ ಪರಿವರ್ತನಾಶೀಲ ಸಂಸ್ಥೆಗಳನ್ನು ರಚಿಸುವ ಮೂಲಕ ಅವರ ನಿರಂತರ ಕೊಡುಗೆಗಳನ್ನು ಗುರುತಿಸಿ ರೋಟರಿ ಕ್ಲಬ್ ಆಫ್ ಬಾಂಬೆಯಿಂದ ನೀತಾ ಅಂಬಾನಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ” ಎಂದು ರಿಲಯನ್ಸ್ ಫೌಂಡೇಶನ್ ಟ್ವಿಟರ್ ನಲ್ಲಿ ತಿಳಿಸಿದೆ.
ಸಿಟಿಜನ್ ಆಫ್ ಮುಂಬೈ ಪ್ರಶಸ್ತಿ ೨೦೨೩-೨೪ ರಿಂದ ಸ್ವೀಕರಿಸಿದ ನೀತಾ ಅಂಬಾನಿ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನೀತಾ ಅಂಬಾನಿ, “ನಮ್ಮ ನಗರ ಮತ್ತು ಸಮುದಾಯಕ್ಕೆ ರೋಟರಿ ಕ್ಲಬ್ ಆಫ್ ಬಾಂಬೆಯ ಅಪಾರ ಕೊಡುಗೆ ನೀಡಿದೆ. ಈ ಪ್ರಶಸ್ತಿಯನ್ನು ಎ ನಮ್ರತೆಯಿಂದ ಮತ್ತು ಅಪಾರ ಗೌರವದಿಂದ ಸ್ವೀಕರಿಸುತ್ತೇನೆ” ಎಂದು ಹೇಳಿದ್ದಾರೆ.
“೧೯೬೯ ರಲ್ಲಿ ನನ್ನ ಮಾವ ಧೀರೂಭಾಯಿ ಅಂಬಾನಿ ಗೌರವಾನ್ವಿತ ರೋಟರಿಯನ್ ಆದ ಸಮಯದಿಂದ, ೨೦೦೩ ರಲ್ಲಿ ಮುಖೇಶ್ ನಂತರ ರೋಟರಿಯೊಂದಿಗೆ ನನ್ನ ಕುಟುಂಬದ ಒಡನಾಟ ದಶಕಗಳವರೆಗೆ ವ್ಯಾಪಿಸಿದೆ. ರೋಟರಿಯಾಗಿ ನನ್ನ ೨೫ ನೇ ವರ್ಷವಾಗಿದೆ. ನಾನು ಈ ಪ್ರಯಾಣ ಆನಂದಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!