ಉದಯವಾಹಿನಿ, ಮುಂಬೈ : ಯುವ ರಾಜಕಾರಣಿ ರಾಘವ್ ಚಡ್ಡಾ ಮತ್ತು ನಟಿ ಪರಿಣಿತಿ ಚೋಪ್ರಾ ಭಾನುವಾರ ಉದಯಪುರದ ಐಷಾರಾಮಿ ಹೋಟೆಲ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಉದಯಪುರದ ಹೊಟೇಲ್‌ನಲ್ಲಿ ಮೂರು ದಿನಗಳ ಕಾಲ ಮದುವೆ ಕಾರ್ಯಕ್ರಮಗಳು ನಡೆದವು. ಮದುವೆ ಸಂಭ್ರಮ ಮುಗಿದ ಬೆನ್ನಲ್ಲೇ ಇದೀಗ ಇವರಿಬ್ಬರ ಆರತಕ್ಷತೆ ಕಾರ್ಯಕ್ರಮ ವೈರಲ್ ಆಗಿದೆ.ನವದಂಪತಿಗಳ ಆರತಕ್ಷತೆಗೆ ಸಿದ್ಧತೆ ಆರಂಭವಾಗಿದೆ.
ಇದರಲ್ಲಿ ರಾಜಕೀಯದಿಂದ ಬಾಲಿವುಡ್‌ನವರೆಗಿನ ಎಲ್ಲಾ ತಾರೆಯರು ಭಾಗವಹಿಸಲಿದ್ದಾರೆ. ಅವರ ಆರತಕ್ಷತೆಯ ಮೊದಲ ಸ್ವಾಗತದ ಕಾರ್ಡ್ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ಇದರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೀಗ ಇಬ್ಬರೂ ದೆಹಲಿಯಲ್ಲಿದ್ದಾರೆ. ಮದುವೆಯ ನಂತರ ಪರಿಣಿತಿ ಚೋಪ್ರಾ ಸೋಮವಾರ ತನ್ನ ಅತ್ತೆಯ ಮನೆಗೆ ಬಂದಿದ್ದಾರೆ.
ಉದಯಪುರದಲ್ಲಿ ನಡೆದ ಅವರ ಮದುವೆಗೆ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರನ್ನು ಮಾತ್ರ ಆಹ್ವಾನಿಸಲಾಗಿತ್ತು.
ಈ ಮೊದಲು ಸ್ನೇಹತರು, ಉಳಿದ ಸಂಬಂಧಿಗಳಿಗೆ ಎರಡು ಆರತಕ್ಷತೆ ಏರ್ಪಡಿಸಲಾಗಿದೆ ಒಂದು ಆರತಕ್ಷತೆ ದೆಹಲಿಯಲ್ಲಿ ನಡೆಯಲಿದ್ದು, ಇನ್ನೊಂದು ಆರತಕ್ಷತೆ ಚಂಡೀಗಢದಲ್ಲಿ ನಡೆಯಲಿದೆ ಎಂದು ಹೇಳಲಾಗಿತ್ತು ,ಸದ್ಯಕ್ಕೆ ಚಂಡೀಗಢ ಮತ್ತು ದೆಹಲಿಯಲ್ಲಿ ಆರತಕ್ಷತೆ ರದ್ದಾಗಿದೆ. ಪರಿಣಿತಿ ಮತ್ತು ರಾಘವ್ ಈಗ ಮುಂಬೈನಲ್ಲಿ ತಮ್ಮ ಸ್ನೇಹಿತರಿಗೆ ಅಕ್ಟೋಬರ್ ೪ ರಂದು ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!