ಉದಯವಾಹಿನಿ ಸುರಪುರ : ಪತ್ರಕರ್ತರ ಜ್ವಲಂತ ಸಮಸ್ಯೆಗಳು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುರಪುರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ವತಿಯಿಂದ ರಕ್ತದಲ್ಲಿ ಸಹಿ ಮಾಡಿ ಮನವಿ ಪತ್ರವನ್ನು ಸಲ್ಲಿಸಲಾಯಿತು.  ಸುರಪುರದ ತಾಲೂಕು ದಂಡಾಧಿಕಾರಿಗಳಾದ ಕೆಬಿ ವಿಜಯಕುಮಾರ ಇವರಿಗೆ ಸುರಪುರ ತಾಲೂಕು ಘಟಕದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ ಪತ್ರಕರ್ತರ ಪ್ರಮುಖ ಬೇಡಿಕೆಗಳ ಈಡೇರಿಕೆಯ ಮನವಿ ಪತ್ರಕ್ಕೆ ಕರ್ನಾಟಕ ಕಾನಿಪ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀಯುತ ಬಂಗ್ಲೆ ಮಲ್ಲಿಕಾರ್ಜುನ ರವರ ಆದೇಶದ ಮೇರೆಗೆ ಸುರಪುರ ತಾಲೂಕು ಅಧ್ಯಕ್ಷರಾದ ಮೌನೇಶ ಬಿ.ಮಂಗಿಹಾಳ, ರಾಘವೇಂದ್ರ ಮಾಸ್ತರ, ಭೀಮಾಶಂಕರ ಕರ್ನಾಳ, ನಾಗರಾಜ ದೇಸಾಯಿ, ಮದನ ಕಟ್ಟಿಮನಿ, ಧರ್ಮರಾಜ ಹಾಗೂ ಮೌನೇಶ ಆರ್. ಭೋವಿ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಸಹಿ ಮಾಡಿ ರಾಜ್ಯದಲ್ಲಿ  ಮಾಧ್ಯಮದ ಪತ್ರಕರ್ತರಿಗೋಸ್ಕರ ರಕ್ತದಿಂದ ಮನವಿ ಪತ್ರಕ್ಕೆ ಸಹಿ ಮಾಡಿ ಮಾನ್ಯ ತಹಶೀಲ್ದಾರರ ಮುಖಾಂತರ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಧ್ವನಿ ಸಂಘದ ಎಲ್ಲಾ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!