ಉದಯವಾಹಿನಿ, ನ್ಯೂಯಾರ್ಕ್: ಸುಮಾರು ೩೭೫ ವರ್ಷಗಳಿಂದ ನಾಪತ್ತೆಯಾಗಿದ್ದು ಸರಳ ದೃಷ್ಟಿಗೆ ಕಾಣಸಿಗದ ೮ನೇ ಖಂಡವನ್ನು ಭೂವಿಜ್ಞಾನಿಗಳು ಕಂಡುಹಿಡಿದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಝೀಲ್ಯಾಂಡಿಯಾ ಅಥವಾ ‘ತೆ ರಿಯುವ ಮಾವಿ’ ಎಂದು ಹೆಸರಿಸಲಾದ ಈ ಖಂಡದ ಹೊಸದಾಗಿ ಪರಿಷ್ಕರಿಸಿದ ನಕ್ಷೆಯನ್ನು ಭೂವಿಜ್ಞಾನಿಗಳು ಮತ್ತು ಭೂಕಂಪಶಾಸ್ತ್ರಜ್ಞರ ಸಣ್ಣ ತಂಡವು ರಚಿಸಿದೆ. ಸಾಗರ ತಳದಿಂದ ಮೇಲೆತ್ತಿದ ಕಲ್ಲಿನ ಮಾದರಿಗಳಿಂದ ಪಡೆದ ಡೇಟಾವನ್ನು ಬಳಸಿಕೊಂಡು ಸಂಶೋಧಕರು ಇದನ್ನು ಕಂಡುಹಿಡಿದಿದ್ದಾರೆ. ಸಂಶೋಧನೆಯ ವಿವರ ‘ಟೆಕ್ಟಾನಿಕ್ಸ್’ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಝೀಲ್ಯಾಂಡಿಯಾವು ಸುಮಾರು ೪.೯ ದಶಲಕ್ಷ ಚದರ ಮೈಲು ವಿಸ್ತೀರ್ಣದ ಖಂಡವಾಗಿದ್ದು ಮಡಗಾಸ್ಕರ್ ದೇಶಕ್ಕಿಂತ ಸುಮಾರು ೬ ಪಟ್ಟು ದೊಡ್ಡದಾಗಿದೆ. ವಾಸ್ತವವಾಗಿ ೮ ಖಂಡಗಳಿವೆ ಎಂದು ವಿಜ್ಞಾನಿಗಳು ಹೇಳುತ್ತಿದ್ದರು. ಇದೀಗ ಶೋಧಿಸಲಾಗಿರುವ ವಿಶ್ವದ ಅತ್ಯಂತ ಚಿಕ್ಕ, ತೆಳುವಾದ ಮತ್ತು ಕಿರಿಯ ಖಂಡವೆಂಬ ದಾಖಲೆಗೆ ಪಾತ್ರವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!