ಉದಯವಾಹಿನಿ, ಡಬ್ಲಿನ್ : ಐರ್ಲೆಂಡ್‌ನಲ್ಲಿ ಕಳೆದ ವರ್ಷ ಕಪ್ಪು ವರ್ಣದ ಜಿಮ್ನಾಸ್ಟಿಕ್ ಬಾಲಕಿಗೆ ಪದಕ ನೀಡದೆ ಜನಾಂಗೀಯ ನಿಂದನೆ ತೋರಿದ ಪ್ರಕರಣ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಅಲ್ಲದೆ ಈ ಬಗ್ಗೆ ಕ್ಷಮೆಯಾಚಿಸಿದ ಐರ್ಲೆಂಡ್ ಜಿಮ್ನಾಸ್ಟಿಕ್ ಸಂಸ್ಥೆಯ ಕ್ರಮವನ್ನು ಬಾಲಕಿಯ ಪೋಷಕರು ನಿಷ್ಟ್ರಯೋಜಕ ಎಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು ೧೮ ತಿಂಗಳ ಹಿಂದೆ ಡಬ್ಲಿನ್‌ನಲ್ಲಿ ನಡೆದ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪದಕ ನೀಡಿ ಗೌರವಿಸಲಾಗಿತ್ತು. ಆದರೆ ಸರದಿಯಲ್ಲಿ ನಿಂತಿದ್ದ ಕಪ್ಪು ವರ್ಣೀಯ ಬಾಲಕಿಗೆ ಮಾತ್ರ ಪದಕ ನೀಡದೆ ಅವಮಾನ ಮಾಡಲಾಗಿತ್ತು. ಆದರೆ ಆ ಸಮಯದಲ್ಲಿ ಯಾವುದೇ ವಿವಾದ ಉಂಟಾಗಿರಲಿಲ್ಲ. ಆದರೆ ಇದೀಗ ಬರೊಬ್ಬರಿ ೧೮ ತಿಂಗಳ ಬಳಿಕ ಬಾಲಕಿಗೆ ಪದಕ ನೀಡದೆ ಅವಮಾನ ಮಾಡಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಐರ್ಲೆಂಡ್ ಜಿಮ್ನಾಸ್ಟಿಕ್ ಸಂಸ್ಥೆಯು ಕ್ಷಮೆ ಯಾಚಿಸಿದೆ. ಸದ್ಯ ಈ ಕ್ಷಮೆ ಯಾಚಿಸಿದ ಕ್ರಮವನ್ನು ಬಾಲಕಿಯ ಪೋಷಕರು ತಿರಸ್ಕರಿಸಿದ್ದು, ಇದೊಂದು ಸದ್ಯ ನಿಷ್ಟ್ರಯೋಜಕವಾಗಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಲಕಿಯ ತಾಯಿ, ಘಟನೆ ನಡೆದು ೧೮ ತಿಂಗಳ ಬಳಿಕ ಕ್ಷಮೆಯಾಚಿಸಬೇಕೆ ಇತರರು ಕ್ಷಮೆ ಯಾಚಿಸಬೇಕೆಂಬ ಕೂಗು ಕೇಳಿಬಂದ ಬಳಿಕವಷ್ಟೇ ಅವರು ಕ್ಷಮೆ ಯಾಚಿಸಿದ್ದು, ಇದೊಂದು ಬಹುತೇಕ ನಿಷ್ಟ್ರಯೋಜಕವಾಗಿದೆ.

Leave a Reply

Your email address will not be published. Required fields are marked *

error: Content is protected !!