ಉದಯವಾಹಿನಿ, ಸ್ಟಾಕ್‌ಹೋಮ್ : ಅತ್ಯಂತ ಶ್ರೀಮಂತ, ಪ್ರಕೃತಿ ರಮಣೀಯ ಹಾಗೂ ಅಭಿವೃದ್ದಿ ಹೊಂದಿದ್ದ ಶಾಂತಿಯುತ ರಾಷ್ಟ್ರಗಳಲ್ಲಿ ಒಂದೆಂಬ ಹೆಗ್ಗಲಿಕೆ ಪಡೆದಿರುವ ಸ್ವೀಡನ್‌ನಲ್ಲಿ ಸದ್ಯ ಗ್ಯಾಂಗ್‌ವಾರ್‌ನಿಂದಾಗಿ ಪರಿಸ್ಥಿತಿ ಮಿತಿಮೀರಿದೆ. ಸದ್ಯ ಗ್ಯಾಂಗ್‌ವಾರಗಳನ್ನು ನಿಗ್ರಹಿಸುವ ಸಲುವಾಗಿ ಇದೀಗ ಸ್ವತಹ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಅವರು ಸೇನೆಯ ನೆರವು ಪಡೆಯಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಲ್ಫ್, ಕ್ರಿಮಿನಲ್ ಗ್ಯಾಂಗ್‌ಗಳ ವಿರುದ್ಧ ತಮ್ಮ ಕೆಲಸದಲ್ಲಿ ಸಶಸ್ತ್ರ ಪಡೆಗಳು ಪೊಲೀಸರಿಗೆ ಹೇಗೆ ಸಹಾಯ ಮಾಡಬಹುದು ಎಂಬುದನ್ನು ತಿಳಿಯಲು ಶುಕ್ರವಾರ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಮತ್ತು ರಾಷ್ಟ್ರೀಯ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದೇನೆ. ಸ್ವೀಡನ್ ಈ ಹಿಂದೆಂದೂ ಈ ರೀತಿಯದ್ದನ್ನು ನೋಡಿಲ್ಲ. ಅಲ್ಲದೆ ಯುರೋಪಿನ ಯಾವುದೇ ದೇಶವು ಈ ರೀತಿಯದನ್ನು ನೋಡುತ್ತಿಲ್ಲ. ಸದ್ಯ ಇದೊಂದು ಸ್ವೀಡನ್‌ನ ಕಠಿಣಕಾರಿ ಸಮಯವಾಗಿದೆ.
