ಉದಯವಾಹಿನಿ, ಕೋಲಾರ: ಶಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ ವತಿಯಿಂದ ಅ.೩ ರಂದು ಬೆಳಗಾವಿಯಲ್ಲಿ ನಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿನಂದನ ಸಮಾರಂಭಕ್ಕೆ ಜಿಲ್ಲೆಯ ಕುರುಬ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋಲಾರ ಜಿಲ್ಲಾ ಶಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ ಅಧ್ಯಕ್ಷ ಸಿ.ಸೋಮಶೇಖರ್ ರವರು ಮನವಿ ಮಾಡಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಸಿದ್ದರಾಮಯ್ಯನವರ ಅಭಿನಂದನಾ ಸಮಾರಂಭ ಪೂರ್ವಭಾವಿ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಕುರುಬ ಸಮಾಜದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರ ರಾಷ್ಟ್ರೀಯ ಅಭಿನಂದನ ಸಮಾರಂಭವನ್ನು ಶಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ ರಾಷ್ಟ್ರೀಯ ನಾಯಕರದ ಎಚ್ ವಿಶ್ವನಾಥ್ ಹಾಗೂ ಹೆಚ್.ಎಂ.ರೇವಣ್ಣ ನವರ ನೇತೃತ್ವದಲ್ಲಿ ಅಕ್ಟೋಬರ್ ೩ರಂದು ಮಂಗಳವಾರ ಬೆಳಗಾವಿಯಲ್ಲಿ ಏರ್ಪಡಿಸಿದ್ದು, ಭಾರತ ದೇಶದ ಎಲ್ಲಾ ರಾಜ್ಯಗಳಿಂದ ಕುರುಬ ಸಮಾಜದ ಮಾಜಿ ಹಾಗೂ ಹಾಲಿ ಮಂತ್ರಿಗಳು, ಎಂಪಿ, ಎಂಎಲ್‌ಎ , ಜನಪ್ರತಿನಿಧಿಗಳು, ಕುರುಬ ಸಮಾಜದ ಮುಖಂಡರು, ಸ್ವಾಮೀಜಿಗಳು, ಸಮಾಜದ ಬಂಧುಗಳು ಭಾಗವಹಿಸಲಿದ್ದು, ಕೋಲಾರ ಜಿಲ್ಲೆಯ ಆರು ತಾಲೂಕುಗಳಿಂದ ಸಮಾಜದ ಬಂಧುಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಸಿದ್ದರಾಮಯ್ಯನವರ ಅಭಿನಂದನಾ ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು.
ಪೂರ್ವಭಾವಿ ಸಭೆಯಲ್ಲಿ ಶಫರ್ಡ್ ಇಂಡಿಯಾ ಇಂಟನ್ಯಾಷನಲ್ ಕೋಲಾರ ತಾಲೂಕು ಅಧ್ಯಕ್ಷ ಬಸವನತ್ತ ವಿ .ಶ್ರೀನಿವಾಸ್, ಮುಳಬಾಗಲು ತಾಲೂಕು ಅಧ್ಯಕ್ಷ ಖಾದ್ರಿಪುರ ಶಿವಣ್ಣ ತೋರಡಿ, ಮಾಲೂರು ತಾಲೂಕು ಅಧ್ಯಕ್ಷ ದೇವರಾಜ್, ಶ್ರೀನಿವಾಸಪುರ ತಾಲೂಕು ಅಧ್ಯಕ್ಷ ರೆಡ್ಡಪ್ಪ, ಕೆಜಿಎಫ್ ತಾಲೂಕು ಅಧ್ಯಕ್ಷ ಮಾರಸಂದ್ರ ಬಾಬು, ಬಂಗಾರಪೇಟೆ ತಾಲೂಕು ಅಧ್ಯಕ್ಷ ಮಂಜುನಾಥ್, ಕೋಲಾರ ಜಿಲ್ಲಾ ಎಸ್ ಟಿ ಹೋರಾಟ ಸಮಿತಿ ಅಧ್ಯಕ್ಷ ಸಾಗರ್ ಸಿ.ಎಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಮಟ್ನಹಳ್ಳಿ ವೆಂಕಟೇಶ್ ಮೂರ್ತಿ, ಉಪಾಧ್ಯಕ್ಷ ಬಾಬಣ್ಣ ಮುಖಂಡರಾದ ಕುರುಬರ ಪೇಟೆ ನಾರಾಯಣಸ್ವಾಮಿ, ಕೋದಂಡರಾಮ, ಗಣೇಶ್ ಕೋಡಿರಾಮಸಂದ್ರ ,ಉದಯ್ ಕುಮಾರ್, ಭತ್ಯಪ್ಪ, ಕಿರಣ್ ಕನಕನ ಪಾಳ್ಯ, ಕಠಾರಿಪಾಳ್ಯ ಬಾಲು ಮುಂತಾದವರು ಉಪಸ್ಥಿತರಿದ್ದರು.
