ಉದಯವಾಹಿನಿ, ಮೈಸೂರು: ಪ್ರವಾಸೋದ್ಯಮ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆ ಮತ್ತು ವಿಶ್ವ ಪ್ರವಾಸೋದ್ಯಮ ದಿನಾಚರಣೆ-2023ರ ಅಂಗವಾಗಿ ಇಂದು ನಗರದ ಚಾಮುಂಡಿ ಬೆಟ್ಟದ ಪಾದದ ಬಳಿ ಸ್ವಚತಾ ಪಖ್ವಾಡ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಾನ್ಯ ರಕ್ಷಣಾ ಸಚಿವಾಲಯ ಮತ್ತು ಪ್ರವಾಸೋದ್ಯಮ ಸಚಿವಾಲಯದ ಸಚಿವರಾದ ಅಜಯ್ ಭಟ್ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿ ಚಾಮುಂಡೇಶ್ವರಿ ದರ್ಶನ ಪಡೆದು ನಂತರ ಸ್ವಚ್ಛತಾ ಪಖ್ವಾಡ್ ತಂಡದವರಿಗೆ ಅಭಿನಂದಿಸಿದರು.
ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಸ್ವಚ್ಛತೆಯೇ ಸೇವೆ ಎಂಬ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಚಾಮುಂಡಿ ಬೆಟ್ಟದ ಎಲ್ಲಾ ಮೆಟ್ಟಲುಗಳನ್ನು ಸ್ವಚ್ಛಗೊಳಿಸಿದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಎಂ ಕೆ ಸವಿತಾ, ಸಹಾಯಕ ನಿರ್ದೇಶಕರಾದ ರಾಘವೇಂದ್ರ, ಕಾರ್ಯಪಾಲಕ ಅಭಿಯಂತರರಾದ ಮೃತ್ಯುಂಜಯ, ಪ್ರವಾಸೋದ್ಯಮ ಅಧಿಕಾರಿ ರಾಸೂಲ್, ಗೈಡ್ ಅಸೋಸಿಯೇಷನ್ ಚೇರ್ಮನ್ ಅಶೋಕ್ ಹಾಗೂ ಗೈಡ್ಸ್, ರಾಜಸ್ವ ನಿರೀಕ್ಷಕರಾದ ಶಿವಪ್ರಸಾದ್, ಪ್ರೀತಿ, ವಿದ್ಯಾವರ್ಧಕ ಪದವಿ ಕಾಲೇಜಿನ ಡಾ. ಶ್ರೀ ಹರ್ಷ ಬಿಎಸ್, ಪೆÇ್ರ. ಸಿದ್ದರಾಜು, ರಮೇಶ್ ವಿ, ಮಿಲಿಟರಿ ಅಧಿಕಾರಿಯಾದ ಸುಬೇದಾರ್ ಬಲವಂತ್ ಸಿಂಗ್,13 ಕರ್ನಾಟಕ ಬೆಟಾಲಿಯನ್ ಎನ್ ಸಿ ಸಿ ವಿದ್ಯಾರ್ಥಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!