
ಉದಯವಾಹಿನಿ ಇಂಡಿ : 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆಯಾಗದೇ ತಾಲೂಕು ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು ಬೆಳೆ ಸಮೀಕ್ಷೆ ಯಾಗಿದ್ದರೆ ಮಾತ್ರ ರೈತರಿಗೆ ಹಣ ಜಮೆ ಮಾಡಲಾಗುವದೆಂದು ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳನ್ನೊಳಗೊಂಡು ಖಾಸಗಿ ನಿವಾಸಿಗಳಿಂದ ರೈತರ ಹೊಲಗಳಿಗೆ ಭೇಟಿ ನೀಡಿ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಬೆಳೆಗಳನ್ನು ಆಪ್ ಮೂಖಾಂತರ ಬೆಳೆ ಸಮೀಕ್ಷೆಯ ಕಾರ್ಯ ಮಾಡಲಾಗಿರುತ್ತದೆ.ಇಂಡಿ ತಾಲೂಕು ಬರಗಾಲ ಎಂದು ಘೋಷಣೆಯಾದ ಹಿನ್ನೆಲೆಯಲ್ಲಿ ಬೆಳೆ ಸಮೀಕ್ಷೆಯ ಆಧಾರದ ಮೇಲೆ ಇನ್ ಪುಟ್ ಸಬ್ಸಿಡಿ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ರೈತರ ಖಾತೆಗೆ ಹಣ ಜಮಾ ಮಾಡುವ ಸಾದ್ಯತೆ ಇರುತ್ತದೆ. ಹಾಗೂ ಬೆಳೆ ವಿಮೆ ಪರಿಹಾರವೂ ಕೂಡ ಬೆಳೆ ಸಮೀಕ್ಷೆ ಹಾಗೂ ಬೆಳೆ ಕಟಾವು ಪ್ರಯೋಗಗಳ ಮೇಲೆ ಅವಲಂಬಿತವಾಗಿರುತ್ತದೆ.
ಮಳೆಯಾಗಿ ಒಳ್ಳೆಯ ಇಳುವರಿ ಬಂದು ಬೆಂಬಲ ಬೆಲೆ ಯೋಜನೆಯಡಿ ರೈತರ ಫಸಲನ್ನು ಖರಿದಿಸುವದು ಕೂಡಾ ಬೆಳೆ ಸಮೀಕ್ಷೆ ಆಧಾರದ ಮೇಲೆ ಒಟ್ಟಾರೆಯಾಗಿ ಸರಕಾರದ ಸವಲತ್ತು ಪಡೆಯುವವರು ಬೆಳೆ ಸಮೀಕ್ಷೆಯ ಮೇಲೆಯೆ ಇದೆ. ಆದ್ದರಿಂದ ರೈತರು ತಮ್ಮ ಹೊಲಗಳಲ್ಲಿ ಬೆಳೆದ ಬೆಳೆಯ ಬೆಳೆ ಸಮೀಕ್ಷೆಯು ಆಗಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು.
ಬೆಳೆ ಸಮೀಕ್ಷೆ ಮಾಡಿದ ತಮ್ಮ ಬೆಳೆ ಸಮೀಕ್ಷೆಯಾಗಿದೆಯೋ ಅಥವಾ ಇಲ್ಲವೋ ಎಂಬುದು ಚೆಕ್ ಮಾಡಲು ಕೃಷಿ ಇಲಾಖೆಯ ಲಿಂಕ್ ಕ್ಲಿಕ್ ಮಾಡಬೇಕು. ಆಗ ಬೆಳೆ ದರ್ಶಕ ಆಪ್ ಓಪನ್ ಆಗುತ್ತದೆ. ಅಲ್ಲಿ ಇನ್ ಸ್ಟಾಲ್ ಮೇಲೆ ಕ್ಲೀಕ್ ಮಾಡಬೇಕು. ನಂತರ ಓಪನ ಮೇಲೆ ಕ್ಲೀಕ್ ಮಾಡಬೇಕು. ನಂತರ ರೈತರು ಅಲ್ಲಿ ಕಾಣ ಸುವ ರೈತ ಆಯ್ಕೆ ಮಾಡಿಕೊಳ್ಳಬೇಕು. ನಂತರ ವರ್ಷ, ಹಂಗಾಮು, ಜಿಲ್ಲೆ ತಾಲೂಕು, ಹೋಬಳಿ, ಗ್ರಾಮ, ಸರ್ವೇ ನಂಬರ ನಮೂದಿಸಿ ವಿವರ ಪಡೆಯಬೇಕು. ರೈತರು ತಮ್ಮ ಹೊಲದಲ್ಲಿ ಬೆಳೆದ ಬೆಳೆ ಮತ್ತು ಆಪ್ ನಲ್ಲಿ ನಮೂದಿಸಲಾದ ಬೆಳೆ ತಾಳೆಯಾದರೆ ಸರಿ. ಇಲ್ಲವಾದರೆ ರೈತರು ಅಕ್ಷೇಪಣೆಯನ್ನು ನಿಗದಿತ ಸಮಯದಲ್ಲಿ ಅದೇ ಆಪ್ ಮೂಲಕ ಸಲ್ಲಿಸಿ ಬೆಳೆದ ಬೆಳೆಯನ್ನು ಸರಿಪಡಿಸಿಕೊಳ್ಳಬೇಕು ಎಂದು ಮಹಾದೇವಪ್ಪ ಏವೂರ ತಿಳಿಸಿದ್ದಾರೆ..
