
ಉದಯವಾಹಿನಿ ದೇವರಹಿಪ್ಪರಗಿ: ಪಟ್ಟಣದ 110/33/11ಕೆ.ವ್ಹಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣ ಕಾಮಗಾರಿ ಕೈಗೊಂಡಿರುವುದರಿಂದ ಸರಬರಾಜು ಆಗುವ 33 ಹಾಗೂ 11ಕೆ.ವ್ಹಿ ಮಾರ್ಗಗಳಲ್ಲಿ ಅ.4 ಹಾಗೂ 5ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ವಿಜಯಕುಮಾರ ಹವಾಲ್ದಾರ ತಿಳಿಸಿದ್ದಾರೆ. ದೇವರಹಿಪ್ಪರಗಿ ಹಾಗೂ ಬಿ.ಬಿ.ಇಂಗಳಗಿ 11ಕೆ.ವ್ಹಿ ಎನ್.ಜೆ.ವಾಯ್ ಕೇಂದ್ರದ ಮಾರ್ಗಗಳು ಅ.4 ರಂದು ಬೆಳಗ್ಗೆ 7ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಕಡ್ಲೆವಾಡ 33ಕೆ.ವ್ಹಿ ಕೇಂದ್ರದ ಮಾರ್ಗಗಳು ಅ.5 ರಂದು ಬೆಳಗ್ಗೆ 8ಯಿಂದ ಮಧ್ಯಾಹ್ನ 1ಗಂಟೆಯವರೆಗೆ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿಜಯಕುಮಾರ ಹವಾಲ್ದಾರ ತಿಳಿಸಿದ್ದಾರೆ.
