
ಉದಯವಾಹಿನಿ ಸಿಂಧನೂರು: ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿಗೆ ಅತಿವ ಗೌರವದಿಂದ ಕಂಡವರು ಬಹಳಷ್ಟು ಜನರು, ರಂಗಭೂಮಿಯಿಂದ ಬದುಕು ಕಟ್ಟಿಕೊಂಡವರು ಬಹಳಷ್ಟು ಜನ ವಿರಳ, ಆದರೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕ ಹೊಸಳ್ಳಿ ಗ್ರಾಮದ ಶ್ರೀ ಮೃಡದೇವ ಗವಾಯಿಯವರು ರಂಗಭೂಮಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ಕೊನೆಗೆ ರಂಗಭೂಮಿಗಾಗಿ ಜೀವವಿತ್ತವರು. ಎಂದು ಜಾಲಿಹಾಳ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮುರಡಯ್ಯಸ್ವಾಮಿ ಹೊಸಳ್ಳಿ ಅಭಿಪ್ರಾಯಪಟ್ಟರು. ಅವರು ಕನ್ನಡ ಸಾಹಿತ್ಯ ಪರಿಷತ್ತು ಸಿಂಧನೂರು ವತಿಯಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಹಾಗೂ ದಾರ್ಶನಿಕರ ಮಾಸಿಕ ಕವಿಗೋಷ್ಠಿಯಲ್ಲಿ ಮಾತನಾಡಿದರು.
ಜಾಲಿಹಾಳದ ಗ್ರಾಮದ ಶ್ರೀ ಅಯ್ಯಪ್ಪಯ್ಯ ಸಾಲಿಮಠ ಇವರ ಸ್ಮರಣಾರ್ಥ ದತ್ತಿ ವಿಷಯ ಸಹಕಾರಿ ಸಂಘಗಳ ಪಾತ್ರ ಕುರಿತು. ಉಪನ್ಯಾಸಕ ಶ್ರೀ ಕಾಳಿಂಗರೆಡ್ಡಿ ಉಪನ್ಯಾಸ ನೀಡಿದರು. ಮೃಡದೇವ ಗವಾಯಿಯವರ ಹಾಗೂ ಚಂದ್ರಪ್ಪ ಗೌಡ ನೆಟೆಕಲ್ಲ ಗೋರೆಬಾಳ ಇವರ ಸ್ಮರಣಾರ್ಥ ನೀಡಿದ ದತ್ತಿ ರಂಗಭೂಮಿ ಹಾಗೂ ವೃತ್ತಿ ರಂಗಭೂಮಿಗೆ ಮೃಡದೇವ ಗವಾಯಿಯವರ ಕೊಡುಗೆ ಕುರಿತು ಶ್ರೀ ಬೀರಪ್ಪ ಶಂಬೋಜಿ ಅವರು ಉಪನ್ಯಾಸ ನೀಡಿದರು.ದಾರ್ಶನಿಕರ ಮಾಸಿಕ ಕವಿಗೋಷ್ಠಿಯಲ್ಲಿ ಶರಭಯ್ಯಸ್ವಾಮಿ ಹಿರೇಮಠ. ವೀರೇಶ ಶಿವನಗುತ್ತಿ. ಕುಮಾರಿ ರಂಜಿತಾ. ಮಾನಸ. ರಾಜೇಶ್ವರಿ. ಶಶಿಕಲಾ. ರಾಜೇಶ್ವರಿ ತಿಪ್ಪಯ್ಯ. ಶಾಂತಿ. ಲೋಹಿತಸಂಗೀತ ಕುಮಾರ್, ಕರಿಬಸವ, ಬೀರಪ್ಪ, ಸಂಗೀತ ಸಾರಂಗಮಠ. ಪಂಪಯ್ಯಸ್ವಾಮಿ ಸಾಲಿಮಠ. ಕನ್ನಡ ಭಾಷೆ ನೆಲ ಜಲ ಕುರಿತು ಸ್ವರಚಿತ ಕವನ ವಾಚನ ಮಾಡಿದರು. ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಡಾ ಹುಸೇನಪ್ಪ ಅಮರಾಪೂರ ಕವಿಗಳ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಲಿಂಗಪ್ಪ ಗುಡೂರ ಜಾಲಿಹಾಳ. ಮಲ್ಲಿಕಾರ್ಜುನ ಶಾಸ್ತ್ರಿಗಳು ಹಂಚಿನಾಳ. ಚಂದ್ರಶೇಖರ ಉಪನ್ಯಾಸಕರು. ರಡ್ಡೆಪ್ಪ ಹಳ್ಳಿ ಉಪನ್ಯಾಸಕರು. ಭಾಗವಹಿಸಿದ್ದರು. ದಿವ್ಯ ಸಾನಿಧ್ಯವನ್ನು ಸಿದ್ದಾಶ್ರಮದ ಪರಮ ಪೂಜ್ಯ ಶ್ರೀ ಸದಾನಂದ ತಾತನವರು ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಪಯ್ಯಸ್ವಾಮಿ ಸಾಲಿಮಠ ವಹಿಸಿದರೆ ಸಂಗೀತ ಸಾರಂಗಮಠ ಕಾರ್ಯಕ್ರಮ ನಿರೂಪಿಸಿದರು. ವೀರೇಶ ಎನ್ ಪ್ರಾರ್ಥನೆ ಮಾಡಿದರು. ಗುಂಡುರಾವ್ ಚನ್ನಳ್ಳಿ. ಮತ್ತಿತರರು ಉಪಸ್ಥಿತರಿದ್ದರು
