
ಉದಯವಾಹಿನಿ ಸಿಂಧನೂರು: ಡಾ.ಬಾಬಾ ಸಾಹೇಬರ ಅಂಬೇಡ್ಕರ್ ರವರ ತತ್ವ ಸಿದ್ದಾಂತಗಳ ಅಡಿಯಲ್ಲಿ ನಾವು ನೀವು ಪಾಲಿಸಬೇಕು ಜೊತೆಗೆ ಸಮಾಜದಲ್ಲಿ ಶೋಷಣೆ, ದಬ್ಬಾಳಿಕೆ, ನೊಂದ ಜನರ ಪರವಾಗಿ ಸಂಘಟನೆಯ ಹೋರಾಟ ಇರಬೇಕೆಂದು” ನೂತನ ವಾಗಿ ಸಂಘಟನೆಗೆ ಸೇರ್ಪಡೆಯಾದ ಸದಸ್ಯರು ಮತ್ತು ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಬಹುಜನ ದಲಿತ ಸಂಘರ್ಷ ಸಮಿತಿಯ ಸಭೆಯಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಭೀಮೇಶ ಕವಿತಾಳ ಮಾತನಾಡಿದರು.ಈ ಸಂದರ್ಭದಲ್ಲಿ ನೂತನ ವಾಗಿ ರಾಯಚೂರು ಜಿಲ್ಲೆಯ ಅಧ್ಯಕ್ಷ ರಾಗಿ ಚಂದ್ರಶೇಖರ ಎಡವುಲು,ಜಿಲ್ಲಾ ಉಪಾಧ್ಯಕ್ಷ ರಾಗಿ ದೇವರಾಜ,ಪ್ರಧಾನ ಕಾರ್ಯದರ್ಶಿ ಯಾಗಿ ಆಂಜನೇಯ, ಮಸ್ಕಿ ತಾಲ್ಲೂಕು ಅಧ್ಯಕ್ಷ ರಾಗಿ ಹುಸೇನಸಾಬ ಬಸ್ಸಾಪುರ,ಉಪಾಧ್ಯಕ್ಷರಾಗಿ ಫೀರಸಾಬ ಬಸ್ಸಾಪುರ, ಸಿಂಧನೂರು ತಾಲ್ಲೂಕು ಅಧ್ಯಕ್ಷ ರಾಗಿ ಕೆ.ವೀರೇಶ ಹಂಚಿನಾಳ, ಉಪಾಧ್ಯಕ್ಷ ರಾಗಿ ಲಕ್ಷ್ಮಣ ಪ್ರಧಾನ ಕಾರ್ಯದರ್ಶಿ ಯಾಗಿ ಮಲೇಶ ರವರನ್ನು ನೇಮಕ ಮಾಡಿ ಆದೇಶ ಪತ್ರವನ್ನು ನೀಡಲಾಯಿತು.ಈ ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎನ್.ವೀರೇಶ. ರಾಜ್ಯ ಉಪಾಧ್ಯಕ್ಷ ಮೌನೇಶ ಬುದ್ದಿನ್ನಿ, ರಾಜ್ಯ ಸಂಚಾಲಕರಾದ ಅಲ್ಲಮಪ್ರಭು ಕವಿತಾಳ ಹಾಜರಿದ್ದರು.
