ಉದಯವಾಹಿನಿ, ತಾಳಿಕೋಟೆ: ತಾಲೂಕಿನ ಮಿಣಜಗಿ ಗ್ರಾಂ ಪಂಚಾಯ್ತಿಗೆ ಸರ್ಕಾರದಿಂದ ಕೊಡಮಾಡಲಾದ ಗಾಂಧಿ ಗ್ರಾಮ ಪುರಸ್ಕಾರದ ಪ್ರಶಸ್ತಿಯನ್ನು ಸೋಮವಾರರಂದು ಬೆಂಗಳೂರಿನ ವಿಧಾನಸೌದದಲ್ಲಿ ನಡೆದ ಗಾಂಧಿ ಜಯಂತಿಯಂದು ಪಂಚಾಯತ್ ರಾಜ್ಯ ಸಚಿವ ಪ್ರೀಯಾಂಕಾ ಖರ್ಗೆ ಅವರು ನೀಡಿ ಗೌರವಿಸಿದರು.
ಮಿಣಜಗಿ ಗ್ರಾಂಪಂ ಅಭಿವೃದ್ದಿ ಅಧಿಕಾರಿ ಬಿ.ಎಂ.ಸಾಗರ ಹಾಗೂ ಗ್ರಾಂಪಂ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಮಹಾಂತೇಶ ಬಿರಾದಾರ, ಉಪಾಧ್ಯಕ್ಷೆ ಶ್ರೀಮತಿ ಪಾರ್ವತಿ ರಾಜು ವಡ್ಡರ, ಅವರು ಪ್ರಶಸ್ತಿಯನ್ನು ಸ್ವಿಕರಿಸಿದರು.
ಈ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಳಗೊಂಡು ಸರ್ಕಾರದ ವಿವಿಧ ಇಲಾಖಾ ಸಚಿವರು, ಅಧಿಕಾರಿಗಳು ಉಪಸ್ಥಿತರಿದ್ದರು.
