ಉದಯವಾಹಿನಿ, ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರ ಅಧ್ಯಕ್ಷತೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ರವರು ಸಂಘದ ಪದಾಧಿಕಾರಿಗಳ ಜೊತೆಯಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕುಂದುಕೊರತೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಮಸ್ಯೆಗಳ ಪರಿಹಾರಕ್ಕೆ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಹ ಕಂದಾಯ ಅಧಿಕಾರಿಗಳ ವಿರುದ್ಧ ಸಕಾಲ ಪ್ರಕ್ರಿಯೆಯಲ್ಲಿ ಇಲಾಖಾ ವಿಚಾರಣೆಯನ್ನು ಜರುಗಿಸಿರುವ ಪ್ರಸ್ತಾವನೆಯನ್ನು ಕೈಬಿಡುವ ಬಗ್ಗೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಎಲ್ಲಾ ವೃಂದದ ಸೇವಾ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಲು ಮನವಿ, ಪಾಲಿಕೆಯಲ್ಲಿ ಖಾಲಿ ಇರುವ ಎಲ್ಲಾ ವೃಂದದ ಮುಂಬಡ್ತಿಗಳು ನೀಡಲು ಮತ್ತು ವೃಂದ ಮತ್ತು ನೇಮಕಾತಿ ನಿಯಮಾವಳಿಯಂತೆ ‘ಬಿ’, ‘ಸಿ’ ಮತ್ತು ’ಡಿ’ವೃಂದದ ಅಧಿಕಾರಿ/ನೌಕರರ ವರ್ಗಾವಣೆ/ಮುಂಬಡ್ತಿ ಪಾಲಿಕೆಯಲ್ಲಿ ೩೦ ಹಿರಿಯ ಆರೋಗ್ಯ ಪರಿವೀಕ್ಷಕರಿಗೆ ಹೆಲ್ತ್ ಸೂಪರ್‌ವೈಸರ್ ಹುದ್ದೆಗೆ ಉನ್ನತಿಕರಿಸಿರುವುದನ್ನು ಮುಂಬಡ್ತಿ ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ೧೯೭೬ರ ವೃಂದ ಮತ್ತು ನೇಮಕಾತಿ ನಿಯಮಾವಳಿಯಲ್ಲಿ ೧೪೦ ವ್ಯವಸ್ಥಾಪಕರ ಹುದ್ದೆಯು ಮಂಜೂರಾತಿಯಾಗಿರುತ್ತದೆ. ೨೦೨೦ರ ವೃಂದ ಮತ್ತು ನೇಮಕಾತಿ ನಿಯಮಾವಳಿಯಲ್ಲಿ ೩೨ ವ್ಯವಸ್ಥಾಪಕರ ಹುದ್ದೆಗಳನ್ನು ಕಡಿಮೆ ಮಾಡಿದ್ದು, ಇದರಿಂದ ೩೨ ಪ್ರಥಮ ದರ್ಜೆ ಗುಮಾಸ್ತರು ವ್ಯವಸ್ಥಾಪಕರು ಹುದ್ದೆಗೆ ಮುಂಬಡ್ತಿ ಪಡೆಯಲು ವಂಚಿತರಾಗಿರುವುದರಿಂದ, ಕೂಡಲೇ ೩೨ ವ್ಯವಸ್ಥಾಪಕರ ಹುದ್ದೆಗೆ ಮಂಜೂರಾತಿ ಕುರಿತು ೧೯೮ ವಾರ್ಡ್‌ನಿಂದ ೨೪೩ ವಾರ್ಡ್‌ಗಳು ಹೆಚ್ಚುವರಿ ಮಾಡಿದ್ದು, ಅಗತ್ಯ ಸಿಬ್ಬಂದಿಯನ್ನು ನೇಮಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಸರ್ಕಾರದ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದರೂ ಸಹ ಇದುವರೆವಿಗೂ ಆರ್ಥಿಕ ಇಲಾಖೆ ರವರು ಯಾವುದೇ ರೀತಿ ಅನುಮೋದನೆ ನೀಡಿರುವುದಿಲ್ಲ ಎಂದು ಆಯುಕ್ತರ ಗಮನಕ್ಕೆ ತರಲಾಯಿತು.

Leave a Reply

Your email address will not be published. Required fields are marked *

error: Content is protected !!