ಉದಯವಾಹಿನಿ,ಯಾದಗಿರಿ : ಆರ್ಮಿ ರಿಕ್ರೂಟಿಂಗ್ ಆಫಿಸ್ ಬೆಳಗಾವಿ ಇವರ ವತಿಯಿಂದ ಬರುವ ಡಿಸೆಂಬರ್ 04 ರಿಂದ 15ರ ವರೆಗೆ ಭೂ ಸೇನಾ ನೇಮಕಾತರ್ಯಾಲಿ ಯಾದಗಿರಿಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಅಧಿಕಾರಿಗಳು ಇದಕ್ಕಾಗಿ ಅವಶ್ಯಕ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಬುಧವಾರ ರಂದು ಆರ್ಮಿ ರಿಕ್ರೂಟಿಂಗ್ ಆಫಿಸ್ ಅಧಿಕಾರಿಗಳು ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಯಾದಗಿರಿಯಲ್ಲಿ ಈ ನೇಮಕಾತಿ ನಡೆಸಲು ರ್ಮಿ ರಿಕ್ರೂಟಿಂಗ್ ಆಫಿಸ್ ಉದ್ದೇಶಿಸಿದ್ದು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅವಶ್ಯಕ ಸಹಕಾರ ನೀಡಬೇಕು. ರ್ಮಿ ರಿಕ್ರೂಟಿಂಗ್ ಆಫಿಸ್ ಬೆಳಗಾವಿ ಇದರ ಡೈರೆಕ್ಟರ್ ರಿಕ್ರೂಟಿಂಗ್ ಅವರು ಕೂಡ ಸಂಬಂಧಿಸಿ ಅಧಿಕಾರಿಗಳೊಂದಿಗೆ ನಗರದ ಜಿಲ್ಲಾ ಕ್ರೀಡಾಂಗಣ ಪರಿಶೀಲಿಸಿ ಮೂಲಸೌಕರ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ಅವರು ಸಲಹೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಬೆಳಗಾವಿ ರ್ಮಿ ರಿಕ್ರೂಟಿಂಗ್ ಆಫಿಸ್ ಡೈರೆಕ್ಟರ್ ರಿಕ್ರೂಟಿಂಗ್ ಕರ್ನಲ್ ನಿಶಾಂತಶೆಟ್ಟಿ ಅವರು ಮಾತನಾಡಿ ಬರುವ ಡಿಸೆಂಬರ್ 04 ರಿಂದ 15ರ ವರೆಗೆ ಈ ನೇಮಕಾತಿ ರ್ಯಾಲಿಯನ್ನು ನಗರದ ಜಿಲ್ಲಾ ಕ್ರೀಡಾಂಗಣದ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಒಟ್ಟು 6 ಜಿಲ್ಲೆಗಳ 9,521 ಅಭ್ಯರ್ಥಿಗಳು ಈ ರ್ಯಾಲಿಯಲ್ಲಿ ಭಾಗವಹಿಸಲಿದ್ದು, ಬೆಳಗಾವಿ, ಕಲಬುರಗಿ, ರಾಯಚೂರು, ಕೊಪ್ಪಳ, ಬಿದರ್, ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳ ನೇಮಕಾತಿ ನಡೆಯಲಿದೆ.
