ಉದಯವಾಹಿನಿ, ಶಹಾಪುರ: ಶಹಾಪುರ ನಗರದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ, ಪೇಠ ಶಹಾಪುರದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಸರ್.ಎಂ.ವಿಶ್ವೇಶ್ವರಯ್ಯನವರ 163ನೇ ಹಾಗೂ ಕ್ರಾಂತಿಕಾರಿ ಭಗತ್‍ಸಿಂಗ್ ರವರ 116ನೇ ಜನ್ಮದಿನಾಚರಣೆ ಆಚರಣೆಯನ್ನು ಪೂಜ್ಯ ಶ್ರೀ ವಿಶ್ವರಾಧ್ಯ ಮಹಾಸ್ವಾಮಿಗಳು, ಶ್ರೀ ದ್ವಾದಶ ಜ್ಯೋತಿಲಿರ್ಂಗೇಶ್ವರ ದೇವಸ್ಥಾನ, ಬಸವೇಶ್ವರ ನಗರ, ಶಹಾಪುರ ಇವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ನೋಟ್‍ಬುಕ್ ಹಾಗೂ ಪೆನ್‍ನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾಗಿ ಶ್ರೀ ಮಲ್ಲಿಕಾರ್ಜುನ ಮುದನೂರ ಆಗಮಿಸಿದ್ದರು, ಅತಿಥಿಗಳಾಗಿ ಶ್ರೀ ಗುರುಕಾಮಾ, ಶ್ರೀ ಈರಣ್ಣ ಹಾದಿಮನಿ, ಚಂದ್ರಶೇಖರ ಎಂ ಕಟ್ಟಿಮನಿ, ಕನ್ಮನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಶ್ರೀ.ಮಡಿವಾಳಪ್ಪ ಪಾಟೀಲ್ ಹೆಗ್ಗಣದೊಡ್ಡಿ , ಮಲ್ಲಿಕಾರ್ಜುನ ಮಿಮಿಕ್ರಿ ಎಕೆ ನ್ಯೂಸ್, ಶ್ರೀ ಬಸವರಾಜ ಶರಣಪ್ಪ, ಸುನೀಲ್ ಹಳಿಸಗರ ಆಗಮಿಸಿದ್ದರು.
