ಉದಯವಾಹಿನಿ : ಜಗತ್ತು ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧವಾಗುತ್ತಿರುವ ಸಂದರ್ಭದಲ್ಲಿ ಭಾರತೀಯರ ಬಿರಿಯಾನಿ ಮೇಲಿನ ಮೋಹ ಕಡಿಮೆಯಾಗುತ್ತಿದ್ದಂತೆ ಕಾಣುತ್ತಿಲ್ಲ. ತನ್ನ 10ನೇ ವಾರ್ಷಿಕ ವರದಿ ‘ಹೌ ಇಂಡಿಯಾ ಸ್ವಿಗೀಡ್‌ನಲ್ಲಿ (ಭಾರತ ಹೇಗೆ ಸ್ವಿಗಿಯಲ್ಲಿ ಆಹಾರ ಖರೀದಿಸಿದೆ) ಹೇಳುವ ಪ್ರಕಾರ 2025ರಲ್ಲಿ 93 ದಶಲಕ್ಷ ಬಿರಿಯಾನಿಗಳನ್ನು ಯಲ್ಲಿ ಆರ್ಡರ್ ಮಾಡಲಾಗಿದೆ. 2024ರಲ್ಲಿ 83 ದಶಲಕ್ಷ ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿತ್ತು. ಈ ವರ್ಷ ಹತ್ತು ದಶಲಕ್ಷ ಹೆಚ್ಚುವರಿ ಬಿರಿಯಾನಿ ಆರ್ಡರ್ ಆಗಿದೆ.

ಈ ಸಂಖ್ಯೆಯನ್ನು ಸ್ಪಷ್ಟವಾಗಿ ವಿವರಿಸುವುದಾದಲ್ಲಿ ಭಾರತೀಯರು ಸ್ವಿಗಿಯಲ್ಲಿ ಪ್ರತಿ ನಿಮಿಷಕ್ಕೆ 194 ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಅಥವಾ ಪ್ರತಿ ಸೆಕೆಂಡಿಗೆ 3.25 ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಬಿರಿಯಾನಿಗಳಲ್ಲಿ ಚಿಕನ್ ಬಿರಿಯಾನಿಯೇ 57.7 ದಶಲಕ್ಷ ಆರ್ಡರ್ ಗಳಷ್ಟಿತ್ತು. ಈ ವಿಭಾಗದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ರಿಪೀಟ್ (ಮರು) ಆರ್ಡರ್ ದೊರೆತಿದೆ. 2024ರಲ್ಲಿ ಹೈದರಾಬಾದ್ ನಲ್ಲಿ 9.7 ದಶಲಕ್ಷ ಬಿರಿಯಾನಿ ಆರ್ಡರ್ ಆಗಿತ್ತು. ಬೆಂಗಳೂರಿನಲ್ಲಿ 7.7 ದಶಲಕ್ಷ ಬಿರಿಯಾನಿ ಹಾಗೂ ಚೆನ್ನೈನಲ್ಲಿ 4.6 ದಶಲಕ್ಷ ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿತ್ತು. ಹಬ್ಬದ ಸಂದರ್ಭದಲ್ಲಿ ಬಿರಿಯಾನಿಯ ಪ್ರಾಮುಖ್ಯತೆ ಹೆಚ್ಚಾಗಿರುತ್ತದೆ. 2024ರಲ್ಲಿ ರಮಝಾನ್ ಸಂದರ್ಭದಲ್ಲಿಯೇ 6 ದಶಲಕ್ಷ ಬಿರಿಯಾನಿ ಆರ್ಡರ್ ಮಾಡಲಾಗಿತ್ತು!

ಬಿರಿಯಾನಿ ಜನರಿಗೆ ಇಷ್ಟ ಎಂದ ತಕ್ಷಣ ಪಿಝಾ ಮತ್ತು ಬರ್ಗರ್ ಗಳ ಆರ್ಡರ್ ಕಡಿಮೆಯಾಗಿದೆ ಎಂದಲ್ಲ. ಬರ್ಗರ್ ಗಳು ಮತ್ತು ಪಿಝಾಗಳನ್ನು ಕ್ರಮವಾಗಿ 44.2 ದಶಲಕ್ಷ ಮತ್ತು 40.1 ದಶಲಕ್ಷದಷ್ಟು ಆರ್ಡರ್ ಮಾಡಲಾಗಿದೆ. ಈ ನಡುವೆ ಸಸ್ಯಾಹಾರಿ ತಿನಿಸಾದ ದೋಸೆಯನ್ನು 26.2 ಬಾರಿ ಆರ್ಡರ್ ಮಾಡಲಾಗಿದೆ. ಹೀಗಾಗಿ ಇಂದಿಗೂ ರಾಷ್ಟ್ರಾದ್ಯಂತ ಜನರ ಮನದಲ್ಲಿ ನೆಲೆಯೂರಿದ ತಿನಿಸಾಗಿದೆ ದೋಸೆ. ಮಾತ್ರವಲ್ಲದೆ ದಕ್ಷಿಣ ಭಾರತದ ಪಾರಂಪರಿಕ ತಿನಿಸು ಇಂದಿಗೂ ತನ್ನ ಘಮವನ್ನು ಉಳಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಬೆಂಗಳೂರು, ಮುಂಬೈ ಮತ್ತು ಹೈದರಾಬಾದಲ್ಲಿಯೇ 23 ದಶಲಕ್ಷ ದೋಸೆಯನ್ನು ಆರ್ಡರ್ ಗಳನ್ನು ಮಾಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!