ಉದಯವಾಹಿನಿ, ರಾಯಚೂರು: ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ಐಐಟಿ ವಂಚಿತಗೊಂಡ ನಂತರ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ನಡೆಸುತ್ತಿರುವ ಹೋರಾಟ ೫೧೦ನೇ ದಿನಕ್ಕೆ ಕಾಲಿಟ್ಟಿದೆ.
ನಿನ್ನೆ ನಡೆದ ಧರಣಿ ಸತ್ಯಾಗ್ರಹದಲ್ಲಿ ಡಾ.ಬಸವರಾಜ್ ಕಳಸ, ನರಸಪ್ಪ ಬಾಡಿಯಾಳ್, ಡಾ.ಎಸ್.ಎಸ್.ಪಾಟೀಲ್, ಜಗದೀಶ್ ಪೂರತಿಪಲಿ, ಜಸ್ವಂತ್ ರಾವ್ ಕಲ್ಯಾಣಕಾರಿ, ಕಾಮರಾಜ್ ಪಾಟೀಲ್, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅನಿತಾ ಬಸವರಾಜ್ ಮಂತ್ರಿ, ರಾಂಪುರ ಸತ್ಯರೆಡ್ಡಿ, ಕೃಷ್ಣ ರೆಡ್ಡಿ, ಚನ್ನಪ್ಪ, ಅಮರೇಶ್ ಜಾಗ್ಭಾವಿ, ಶಿವಕುಮಾರ್, ಗಂಗಣ್ಣ ಸಾಹುಕಾರ್, ಆಸಿಫ್, ಶಿವರಾಜ್ ಜಗ್ಲಿ, ಪರುಷ ರಾಮ್, ವೀರೇಶ್ ಬಾಬು, ವೀರಭದ್ರಪ್ಪ ಅಂಬರ್ಪಿಟೆ, ನಾಸೀರ್ ಹೊಸೂರ್, ಮಲ್ಲಿಕಾರ್ಜುನ್, ಸಂಗಮೇಶ್ ಮಂಗಣ್ಣನವರ್, ವೆಂಕಯ್ಯ ಶೆಟ್ಟಿ ಹೊಸಪೇಟೆ, ಬಸವರಾಜ್ ಮಿಮಿಕ್ರಿ, ವೆಂಕಟರೆಡ್ಡಿ ದಿನ್ನಿ. ಬೆಟ್ಟಪ್ಪ ಹೋಕ್ರಣಿ, ಚಂದ್ರಶೇಖರ್ ಭಂಡಾರಿ, ಅಜೀಜ್, ಸಚೀತ್ ಹಾಗೂ ಮುಂತಾದವರು ಇದ್ದರು.
