ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ನಿಡಗುಂದಾದಿಂದ ಕರ್ಚಖೇಡ,ಗಣಪೂರ ಮಾರ್ಗದ ಕುಂಚಾವರಂ ಕ್ರಾಸ್ ವರೆಗೆ ನೂತನವಾಗಿ ನಿರ್ಮಿಸಿದ ರಸ್ತೆವು ಕಳಪೆಮಟ್ಟದಿಂದ ಮಾಡಿರುವುದರಿಂದ ಸಂಪೂರ್ಣ ರಸ್ತೆ ಹದಗೆಟ್ಟಿದ್ದು ರಸ್ತೆ ಉದ್ದಗಲಕ್ಕೂ ಗುಂಡಿಗಳು ಬಿದ್ದಿದ್ದು ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕರ್ಚಖೇಡ ಗ್ರಾಮಸ್ಥ ಮುಕುಂದರೆಡ್ಡಿ ಆರೋಪಿಸಿದ್ದಾರೆ.ಈ ರಾಜ್ಯ ಹೆದ್ದಾರಿಯು ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಲ್ಲಿ ಸೇಡಂ ಮತ್ತು ಚಿಂಚೋಳಿ ತಾಲ್ಲೂಕಿಗೆ ಒಳಪಡುವ ನಿಡಗುಂದಾ,ಕರ್ಚಖೇಡ, ಗಣಪೂರ,ಗರಗಪಳ್ಳಿ,ಭಕ್ತಂಪಳ್ಳಿ ಮಾರ್ಗ ಕುಂಚಾವರಂ ಕ್ರಾಸ್ ವರೆಗೆ ಸುಮಾರು 2250ಲಕ್ಷ ರೂ.ಅನುದಾನದಲ್ಲಿ ಮಾಡಲಿರುವ ರಸ್ತೆಯು ಕಳಪೆಮಟ್ಟದಿಂದ ಮಾಡಿರುವುದರಿಂದ ಸಂಪೂರ್ಣ ರಸ್ತೆ ಉದ್ದಗಲಕ್ಕೂ ತೆಗ್ಗುಗುಂಡಿಗಳು ಬಿದ್ದಿರುವುದರಿಂದ ಸಾರ್ವಜನಿಕರಿಗೆ ನಗರ ಪ್ರದೇಶಗಳಿಗೆ ಹಾಗೂ ಆಸ್ವತ್ರೆಗಳಿಗೆ ಹೋಗಲು ಹಾಗೂ ವಿಧ್ಯಾರ್ಥಿಗಳು ಶಾಲಾಕಾಲೇಜುಗಳಿಗೆ ಹೋಗಲು ತುಂಬಾ ತೊಂದರೆ ಅನುಭವಿಸಬೇಕಾಗುತ್ತಿದೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಈಗಾಗಲೇ 2022ರಲ್ಲಿ ಡಾಂಬರಿಕರಣ ರಸ್ತೆ ನಿರ್ಮಾಣ ಭೋರ್ಡ್ ವಿದ್ದು ಆದರೆ ರಸ್ತೆಯ ಯಾವುದೇ ನಿರ್ವಹಣೆ ಇಲ್ಲದೆ ತಗ್ಗುಗುಂಡಿಗಳು ಬಿದ್ದಿರುವುದರಿಂದ ಹೊಸಬರು ಈ ರಸ್ತೆಗೆ ಬಂದರೆ ತಗ್ಗುಗುಂಡಿಗಳಲ್ಲಿ ಬಿದ್ದು ಅನೇಕರು ಅಪಘಾತವಾದ ಉದಾಹರಣೆ ಜನರ ಕಣ್ಣುಮುಂದೆ ಇದೆ. ಸಿಮೇಂಟ್ ಕಾರ್ಖಾನೆಯ ಅತಿಭಾರವಾದ ಲಾರಿಗಳು ಬರುತ್ತಿರುವುದರಿಂದ ರಸ್ತೆಯು ತುಂಬಾ ಹದಗೆಟ್ಟು ಹೋಗುತ್ತಿದೆ ಭಾರವಾದ ಲಾರಿಗಳ ಭಾರತಕ್ಕಂತೆ ರಸ್ತೆಗಳು ನಿರ್ಮಿಸಬೇಕು ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!