ಉದಯವಾಹಿನಿ,ಚಿತ್ರದುರ್ಗ:  ಆಯುರ್ವೇದ ಚಿಕಿತ್ಸೆ ಅದು ದೇಶೀಯ ಚಿಕಿತ್ಸಾ ಪದ್ಧತಿಯಾಗಿದ್ದು ಯಾವುದೇ ಕಾಯಿಲೆಗಳನ್ನು ಬೇರುಸಮೇತ ಗುಣಪಡಿಸುವ ಪರಿಣಾಮಕಾರಿ ಸತ್ವವನ್ನು ಹೊಂದಿದೆ ಆಯುರ್ವೇದ  ಚಿಕಿತ್ಸಾ ಪದ್ಧತಿ ರೋಗಗಳನ್ನು ಗುಣಪಡಿಸುದು ನಿಧಾನ ಗತಿ ಎಂಬ ತಾತ್ಸಾರ ಮನೋಭಾವ ಹೊಂದದೆ ಎಲ್ಲರೂ ಆಯುರ್ವೇದ  ಚಿಕಿತ್ಸೆಯ ಲಾಭವನ್ನು ಪಡೆಯಿರಿ’ ಎಂದು ಜೆ ಎನ್ ಕೋಟೆ ಆಯುರ್ವೇದ ಚಿಕಿತ್ಸಾಲಯದ ಆಡಳಿತ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮಿ ಹೇಳಿದರು.
ಜಿಲ್ಲಾ ಪಂಚಾಯತಿ ಚಿತ್ರದುರ್ಗ, ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ ಸಹಯೋಗದೊಂದಿಗೆ ಚಿತ್ರದುರ್ಗ ತಾಲ್ಲೂಕಿನ ಜೆ ಎನ್ ಕೋಟೆ ಸರ್ಕಾರಿ ಆಯುರ್ವೇದ ಕ್ಷೇಮ ಕೇಂದ್ರದ ವತಿಯಿಂದ ಶುಕ್ರವಾರ ಗ್ರಾಮದ ಅಂಗನವಾಡಿ ಕೇಂದ್ರದ ಆವರಣದಲ್ಲಿ ಮಹಾತ್ಮ ಗಾಂಧಿಜೀ ಅವರ 157ನೇ ಜಯಂತೋತ್ಸವ ಸಪ್ತಾಹ ಅಂಗವಾಗಿ ಆಯುಷ್ಮಾನ್ ಭವ ಆರೋಗ್ಯ ಯೋಜನೆಯಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆಯುರ್ವೇದ ಔಷಧ ದೇಹದ ಮೇಲೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. ನೈಸರ್ಗಿಕ ವಾಗಿ ಉತ್ತಮ ಚಿಕಿತ್ಸೆ ದೊರೆಯುವ ಪದ್ಧತಿ ಇದಾಗಿದೆ ಎಂದರು. ಪ್ರತಿಯೊಬ್ಬರೂ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಜಾಣತನ. ಗ್ರಾಮೀಣ ಭಾಗದಲ್ಲಿ ಹೀಗೆ ಏರ್ಪಡುವ ಶಿಬಿರಗಳ ಉಪಯೋಗವನ್ನು ಗ್ರಾಮಸ್ಥರು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸರ್ಕಾರಿ ಆಸ್ಪತ್ರೆಗಳು ಎಂದು ಮೂಗು ಮುರಿಯುವುದು ಬೇಡ. ಈಗ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಉತ್ತಮ ಸೇವೆ ಲಭಿಸುತ್ತಿದೆ ಎಂದರು. ಶಿಬಿರದಲ್ಲಿ ಮೂವತ್ತೆಂಟು ಫಲಾನುಭವಿಗಳು  ಆರೋಗ್ಯ ಚಿಕಿತ್ಸೆಯನ್ನು ಪಡೆದರು. ಈ ಸಂಧರ್ಭದಲ್ಲಿ ಅಂಗನವಾಡಿ ಕಾರ್ಯ ಕರ್ತೆಯರಾದ ಶ್ರೀಮತಿ ಭಾಗ್ಯಮ್ಮ ಹಾಗೂ ಮಂಗಳಮ್ಮ ಸಹಕಾರ ನೀಡಿದರು.

Leave a Reply

Your email address will not be published. Required fields are marked *

error: Content is protected !!