ಉದಯವಾಹಿನಿ, ಮಾಲೂರು : ತಾಲೂಕಿಗೆ ಕೈಗಾರಿಕೆಗಳು ವರದಾನವಾಗಿದ್ದು, ಕೈಗಾರಿಕೆಗಳ ಆಡಳಿತ ಮಂಡಳಿಗಳು ಪರಿಸರ ಮಾಲಿನ್ಯ ಮಂಡಳಿಯ ನಿಯಮಗಳು ಪಾಲಿಸಿ ಪರಿಸರದ ಮೇಲೆ ಪರಿಣಾಮ ಬೀರದಂತೆ ಕೈಗಾರಿಕಾ ತ್ಯಾಜ್ಯವನ್ನು ಯಶಸ್ವಿಯಾಗಿ ನಿರ್ವಹಿಸುವುದರ ಮೂಲಕ ಪರಿಸರ ಸಂರಕ್ಷಣೆ ಮಾಡು ವಂತೆ ಜಿಲ್ಲಾಕಾರಿ ಅಕ್ರಂಪಾಷ ಹೇಳಿದರು.
ಪಟ್ಟಣದ ವರವಲಯದ ಹೊಸೂರು ಮಾಲೂರು ರಸ್ತೆಯ ಕೂರಂಡಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಎಪಿಎಲ್, ಅಪೋಲೋ ಲಿಮಿಟೆಡ್ ಪ್ರಸ್ತಾವಿತ ಕಲಾಯಿ ಉಕ್ಕಿನ ಕೊಳವೆಗಳ ಉತ್ಪಾದನಾ ಸಾಮರ್ಥ್ಯ ಮಾಸಿಕ,೫೦೦೦ಎಂಪಿ ಯಿಂದ ೩೦೦೦೦ ಎಂಪಿ ವಿಸ್ತರಿಸಿರುವ ಪರಿಸರ ಸಾರ್ವಜನಿಕ ಆಲಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಕೈಗಾರಿಕೆಗಳು ಪ್ರಾರಂಭವಾಗುತ್ತಿರುವುದರಿಂದ ಜಿಲ್ಲೆಯ ನಿರುದ್ಯೋಗಿ ವಿದ್ಯಾವಂತರಿಗೆ ಉದ್ಯೋಗದ ಅವಕಾಶ ಸಿಗುತ್ತಿದೆ. ಕೈಗಾರಿಕೆಗಳು ಜಿಲ್ಲೆಯ ಹಾಗೂ ಇಲ್ಲಿನ ಮಾಲೂರು ತಾಲೂಕಿಗೆ ವರದಾನವಾಗಿದೆ. ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಿರುವ ಕೈಗಾರಿಕಾ ಆಡಳಿತ ಮಂಡಳಿಗಳು ಪರಿಸರ ಮಂಡಳಿ ನಿಯಮಗಳನ್ನು ಪಾಲಿಸಿ ಪರಿಸರದ ಮೇಲೆ ದುಷ್ಪರಿಣಾಮ ಬೀರದಂತೆ ಕೈಗಾರಿಕಾ ತ್ಯಾಜ್ಯವನ್ನು ಯಶಸ್ವಿಯಾಗಿ ನಿರ್ವಹಿಸಬೇಕಾಗಿದೆ. ಜೊತೆಗೆ ಪರಿಸರ ಸಂರಕ್ಷಣೆ ಮಾಡುವ ಉಜ್ವಲ ಪರಿಸರ ಸಂರಕ್ಷಣೆ ಮಾಡುವ ಪ್ಲಾಂಟ್ ಗಳನ್ನು ಆಧುನಿಕ ತಾಂತ್ರಿಕತೆಯನ್ನು ಬಳಸಿ ತ್ಯಾಜ್ಯವನ್ನು ಯಶಸ್ವಿಯಾಗಿ ನಿರ್ವಹಿಸಬೇಕಿದೆ.

Leave a Reply

Your email address will not be published. Required fields are marked *

error: Content is protected !!