
ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯವು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿರ್ವಹಣೆ ಇಲ್ಲದೆ ಜಲಾಶಯ ದಂಡೆಗೂ ಹಾಗೂ ರೈತರ ಜಮೀನುಗಳಿಗೆ ಬಿಡುವ ನೀರಿನ ಕ್ಯಾನಲ್ ಗಳಿಗೂ ಗಿಡಗಂಟ್ಟೆಗಳು ಮರಗಳು ಬೆಳೆದು ಮರದ ಬೇರಿನಿಂದ ಜಲಾಶಯ ನೀರು ಸೋರಿಕೆಯಾಗುವ ಭಯವಾದರೆ ಮತ್ತೊಂದು ಕಡೆ ರೈತರ ಜಮೀನುಗಳಿಗೆ ನೀರು ಸಗಸವಾಗಿ ಹೋಗದೆ ನೀರು ಹೆಚ್ಚಿನ ಪ್ರಮಾಣದಲ್ಲಿ ಪೋಲಾಗುತ್ತಿವೆ.ತಾಲ್ಲೂಕಿನ ಸುಪ್ರಸಿದ್ಧ ಪ್ರವಾಸಿತಾಣ ಆಗಿರುವ ಚಂದ್ರಂಪಳ್ಳಿ ಜಲಾಶಯವು 1975ರಲ್ಲಿ ಮಾಜಿ ಮುಖ್ಯಮಂತ್ರಿ ದಿ.ವೀರೇಂದ್ರ ಪಾಟೀಲರವರು ರೈತರ ಏಳಿಗೆಗಾಗಿ ಜಲಾಶಯವು ನಿರ್ಮಿಸಿ ಸುಮಾರು 5160 ಹೆಕ್ಟೇರ್ ಭೂಮಿಯನ್ನು ನೀರುಣಿಸುವಂತೆ ನೀರಾವರಿ ಪ್ರದೇಶ ಮಾಡಿದರು.
ಜಲಾಶಯ ನೀರಿನ ಕ್ರೂಢೀಕರಣ 1902ಎಮ್.ಸಿಎಫ್.ಟಿ,6 ದ್ವಾರಗಳು,ಜಲಾಶಯ ಪೂರ್ಣ ಮಟ್ಟ 493.16ಅಡಿವಿದೆ. ಈಗಿನ ಜನಪ್ರತಿನಿಧಿಗಳು ಅಧಿಕಾರಿಗಳು ಜಲಾಶಯಕ್ಕೆ ನಿರ್ಲಕ್ಷ್ಯ ತೋರುತ್ತಿರುವುದರಿಂದ ಜಲಾಶಯಕ್ಕೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ,ಕ್ಯಾನಲ್ ನಿರ್ವಹಣೆ,ಜಲಾಶಯ ದಂಡೆ ನಿರ್ವಹಣೆ ಇಲ್ಲದೆ ಗಿಡಗಂಟ್ಟಿಗಳು ದೊಡ್ಡ ದೊಡ್ಡ ಮರಗಳು ಬೆಳೆದು ಜಲಾಶಯದಲ್ಲಿ ಮರದ ಬೇರುಗಳು ಹೋಗಿ ಜಲಾಶಯಕ್ಕೆ ಅಪಾಯ ಆಗುವುದು ಸಂಭವ ಇರುವುದು ಸಹಜವಾಗಿದೆ. ಒಂದೆಡೆ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹೋಗುತ್ತಿಲ್ಲಾ ಎಂಬುವುದು ರೈತರ ಗೋಳಾಗಿದ್ದು ಹಾಗೂ ಕ್ಯಾನಲ್ ಗಳಲ್ಲಿ ಪಾಚಿ,ಹುಲ್ಲು,ಗಿಡಗಂಟ್ಟೆಗಳು ಬೆಳೆದಿರುವುದರಿಂದ ಜಾನುವಾರುಗಳು,ಮೇಕೆಗಳು,ಯುವಕರು,ರೈ ತರು ನೀರು ಕುಡಿಯಲು ಹೋದರೆ ಗಿಡಗಂಟ್ಟೆಗಳಲ್ಲಿ ಕಾಲುಜಾರಿ ಅಥವಾ ಒಳಗೆ ಸಿಕ್ಕಿಬಿಳುವ ಭಯದ ವಾತಾವರಣ ನಿರ್ಮಾಣವಾಗಿದೆ.ಆದಷ್ಟು ಬೇಗನೆ ಜನಪ್ರತಿನಿಧಿಗಳು ಅಧಿಕಾರಿಗಳು ಏಚ್ಚೇತುಕೊಂಡು ರೈತರಿಗೆ ಸುಗಮವಾಗಿ ನೀರು ಹರಿಯುವಂತೆ ಮಾಡಿ ಜಲಾಶಯದ ಬಂಡ್ ಮೇಲೆ ಬೆಳೆದ ಮರ ಗಿಡಗಂಟ್ಟೆಗಳು ಸ್ವಚ್ಚಗೊಳಿಸಬೇಕು ಎನ್ನುವುದೆ ಸಾರ್ವಜನಿಕರ ಅಭಿಪ್ರಾಯವಾಗಿದೆ.
ಚಂದ್ರಂಪಳ್ಳಿ ಜಲಾಶಯ ನಿರ್ವಹಣೆಗೆ ಗೇಟ್ ದುರಸ್ತಿ ಸೇರಿದಂತೆ ಡಿಸೇಲ್,ಗಿರಿಸ್,ಜಂಗಲ್ ಕಟಿಂಗ್,ಸೇಕ್ಯೂರಿಟಿ,ನೀರಾವರಿ ಮಾನೇಜ್ಮೇಂಟ್,ಮಾಡಲು ಅರ್ಧದಷ್ಟು ಅನುದಾನ ಇಲ್ಲೆ ಖರ್ಚು ಆಗುತ್ತಿದೆ,ವರ್ಷಕ್ಕೆ ಪ್ರತಿ ಹೇಕ್ಟರ್ ಗೆ 600ರೂ.ಯಂತೆ ಒಟ್ಟು 30ಲಕ್ಷ ರೂ.ನೀರಾವರಿ ನಿಗಮದಿಂದ ಅನುದಾನ ಬರುತ್ತೆ ಜಲಾಶಯ ನಿರ್ವಹಣೆಗೆ ಅರ್ಧಹಣ ಖರ್ಚು ಆಗುತ್ತೆ ಕ್ಯಾನಲ್ ಹಾಗೂ ಬಂಡ್ ನಿರ್ವಹಣೆಗೆ ಈಗ ಹೊಸ ದರ ಅನ್ವಯ ಕಾರಣ ಅನುದಾನ ಸರಿಹೋಗುತ್ತಿಲ್ಲಾ ನಿಗಮವು ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಈಗಾಗಲೇ ಪತ್ರ ಬರೆಯಲಾಗಿದೆ.
ಕ್ಯಾನಲ್ ಸರ್ವೇ ಮಾಡಲು ಹಾಗೂ ಹೆಚ್ಚಿನ ಅನುದಾನಕ್ಕೆ ನೀರಾವರಿ ನಿಗಮಕ್ಕೆ ಪತ್ರ ಬರೆಯಲಾಗಿದ್ದು,ಅನುದಾನ ಬಿಡುಗಡೆ ಮಾಡಿದರೆ ನಿರ್ವಹಣೆ ಜೋತೆಗೆ ಅಭಿವೃದ್ಧಿ ಸಹ ಆಗುತ್ತದೆ.
ಸಂಪೂರ್ಣವಾಗಿ ಕ್ಯಾನಲ್ ನೀರು ಹೋಗುವುದಿಲ್ಲ ಬಲದಂಡೆ ಕಾಲುವೆ 12-13 ಗೇಟ್ ವರೆಗೆ ಹಾಗೂ ಎಡದಂಡೆ ಕಾಲುವೆ 22ಗೇಟ್ ವರೆಗೆ ನೀರು ಸಾಗುತ್ತಿವೆ,ರೈತರ ಸಭೆ ಮಾಡುತ್ತೇವೆ ರೈತರ ಬೇಡಿಕೆಯಂತೆ ನೀರು ಹರಿಸಲಾಗುವುದು. ಸುರಕ್ಷತೆಗಾಗಿ ಜಲಾಶಯ ಸಮೀಪ ಒಂದು ಚಿಕ್ಕ ಪೋಲಿಸ್ ಠಾಣೆಯ ಅವಶ್ಯಕತೆವಿದೆ,ಜಲಾಶಯದ ಅಧಿಕಾರಿಗಳ ಮಾತು ಯಾರು ಕೇಳುತ್ತಿಲ್ಲಾ,ಹಾಗೂ ಜಲಾಶಯ ದಂಡೆಯ ಕೊನೆಯಲ್ಲಿ ಅರಣ್ಯ ಇಲಾಖೆಯಿಂದ ಮಾಡಿದ ವಿಶ್ರಾಂತಿ ಕೋಣೆಗಳಿಗೆ ಹೋಗಲು ಜಲಾಶಯ ಬಂಡ್ ಮೇಲೆಯಿಂದ ಸಾಗಬೇಕು ಆದರೆ ವಾಹನಗಳು ತೆರಳುವುದರಿಂದ ಬಂಡ್ ವಿಕ್ ಆಗುವ ಸಾಧ್ಯತೆ ಇರುತ್ತದೆ ಅದಕಾರಣ ವಾಹನ ಸಂಚಾರ ತಡೆಗಟ್ಟಬೇಕು.:- ಚೇತನ್ ಎಸ್.ಕಳಸ್ಕರ ಎಇಇ ಚಂದ್ರಂಪಳ್ಳಿ ಜಲಾಶಯ.
ಚಂದ್ರಂಪಳ್ಳಿ ಜಲಾಶಯದಿಂದ 1000ಹೇಕ್ಟರ್ ರೈತರ ಜಮೀನುಗಳಿಗೆ ಇಲ್ಲಿಯವರೆಗೆ ನೀರು ಬಂದಿರುವುದಿಲ್ಲಾ,ಕ್ಯಾನಲ್ ಗಳಲ್ಲಿ ಪಾಚಿ,ಗಿಡಗಂಟ್ಟೆಗಳು ಬೆಳೆದು ನೀರು ಸಮರ್ಪಕವಾಗಿ ರೈತರ ಜಮೀನುಗಳಿಗೆ ಬರುತ್ತಿಲ್ಲಾ ಅನೇಕ ಕಡೆ ಕಾಲುವೆಗಳು ಒಡೆದು ಹೋಗಿವೆ ದುರಸ್ತಿ ಮಾಡಿಲ್ಲ,ಕಾಲುವೆಗಳಿಗೆ ನೀರು ಬಿಡಲು ಗೇಟ್ ತೆಗೆಯಲು ಸಿಬ್ಬಂದಿಗಳು ಇಲ್ಲ,ಕಳೆಜ 2022ರ ಡಿಸೆಂಬರ್ ತಿಂಗಳಲ್ಲಿ ಸಭೆ ಮಾಡಿ ನೀರು ಬಿಟ್ಟಿದರೆ 35ದಿವಸದಲ್ಲಿ 9ಕಿಮೀ ಮಾತ್ರ ನೀರು ಬಂದಿವೆ ಉಳಿದ ಕಡೆ ಇಲ್ಲಿಯವರೆಗೆ ನೀರು ಬಂದಿರುವುದಿಲ್ಲ,ನೀರಾವರಿ ನಿಗಮ ಹಾಗೂ ಸರ್ಕಾರ ಏಚ್ಚೇತುಕೊಂಡು ರೈತರ ಮೇಲೆ ಕೃಪೆತೋರಿ ಕಾಲುವೆಗಳು ಮತ್ತೊಮ್ಮೆ ದುರಸ್ತಿ ಕಾರ್ಯಕೈಗೊಂಡು ರೈತರಿಗೆ ಸಮರ್ಪಕವಾಗಿ ನೀರು ಹರಿಯುವಂತೆ ಮಾಡಬೇಕು.:- ಶಂಕರ ಭೋಗವಂತಿ ಪ್ರಗತಿಪರ ರೈತ ಚಿಂಚೋಳಿ.
