ಉದಯವಾಹಿನಿ,ತಾಳಿಕೋಟಿ:  ಬೇಡ ಜಂಗಮರು ಈಗಾಗಲೇ ಕಾನೂನಾತ್ಮಕವಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿದ್ದು ಇದನ್ನು ಇನ್ನಷ್ಟು ಸರಳಿಕರಣಗೊಳಿಸಲು ಈ ಸಮಾಜಕ್ಕೆ ಪ್ರಮಾಣ ಪತ್ರವನ್ನು ಕೊಡುವಂತಾಗಲು ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಒತ್ತಾಯಿಸಿ ಸಣ್ಣ ಪ್ರಮಾಣದ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವ ಶರಣಬಸಪ್ಪ ದರ್ಶನಾಪುರ್ ಇವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಶುಕ್ರವಾರ ಬೇಡ ಜಂಗಮ ಒಕ್ಕೂಟದ ರಾಷ್ಟ್ರೀಯ ಗೌರವ ಅಧ್ಯಕ್ಷರು ಚಬನೂರು ಹಿರೇಮಠದ ಪೀಠಾಧಿಪತಿ ಜ್ಯೋತಿಷ್ಯ ರತ್ನ ಪರಮಪೂಜ್ಯ ಶ್ರೀರಾಮಲಿಂಗಯ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಒಕ್ಕೂಟದ ಸರ್ವ ಪದಾಧಿಕಾರಿಗಳು ಸೇರಿ ಸಚಿವ ದರ್ಶನಾಪುರ್ ಇವರಿಗೆ ಮನವಿ ಸಲ್ಲಿಸಿದರು. ಬೇಡ ಜಂಗಮ ಸಮಾಜದ ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಹಾಗೂ ಅವರ ಉದ್ಯೋಗಕ್ಕಾಗಿ ಅತ್ಯಗತ್ಯವಾಗಿ ಬೇಕಾದ ಈ ಪ್ರಮಾಣ ಪತ್ರವನ್ನು ಸರಳಿಕರಣಗೊಳಿಸುವಂತೆ ನಾವು ಹೋರಾಟ ಮಾಡುತ್ತ ಬಂದಿದ್ದೇವೆ ನಮಗೆ ಇಲ್ಲಿವರೆಗೆ ನ್ಯಾಯ ಸಿಕ್ಕಿಲ್ಲ ಈ ಸರ್ಕಾರವು ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಮಾಜದ ಎಲ್ಲ ವರ್ಗಗಳಿಗೂ ನ್ಯಾಯ ಕೊಡುವುದಾಗಿ ಹೇಳಿದೆ ಈ ಕಾರಣಕ್ಕಾಗಿ ಬೇಡ ಜಂಗಮ ಸಮಾಜ ತನ್ನ ಹಕ್ಕಿಗಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದೆ ತಾವು ಸರ್ಕಾರದ ಮೇಲೆ ಒತ್ತಡ ಹಾಕಿ ಈ ಸಮಾಜಕ್ಕೆ ನ್ಯಾಯ ಒದಗಿಸ ಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ. ಇದೇ ಸಂದರ್ಭದಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ್ ಇವರನ್ನು ಒಕ್ಕೂಟದ ವತಿಯಿಂದ ಪರಮ ಪೂಜ್ಯ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ಸನ್ಮಾನಿಸಿ ಆಶೀರ್ವದಿಸಿದರು. ಈ ಸಮಯದಲ್ಲಿ ಸಂಘಟನಾ ಕಾರ್ಯದರ್ಶಿ, ಸಿ.ಎನ್. ಹಿರೇಮಠ್ ಕಾರ್ಯಧ್ಯಕ್ಷ ದಾನಯ್ಯ ಹಿರೇಮಠ್ .ಜಿಲ್ಲಾಧ್ಯಕ್ಷ ಶಂಕ್ರಯ್ಯ ಹಿರೇಮಠ್ ತಾಲೂಕ ಸಂಘಟನಾ ಕಾರ್ಯದರ್ಶಿ ಗಜದಂಡಯ್ಯ ಹಿರೇಮಠ್ ಅಮರಯ್ಯ ಹಿರೇಮಠ. ನಾಗಯ್ಯ ಸ್ವಾಮಿ .ದೇಸಾಯಿ ಗುರು ಮೊದಲಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!