ಉದಯವಾಹಿನಿ ಇಂಡಿ : ಪಟ್ಟಣದಲ್ಲಿ ಗೋ ಹತ್ಯಾ ನಿಷೇಧ ಕಾಯ್ದೆ ಜಾರಿಗೆ ಬಂದರೂ ಇಂಡಿ ತಾಲೂಕಿನಾಂದ್ಯಂತ ಮಾತ್ರ ಕಸಾಯಿ ಖಾನೆ ಗೋ ಕಳ್ಳತನ ಮತ್ತು ಅಕ್ರಮ ಗೋ ಸಾಗಾಟಕ್ಕೆ ಕಡಿವಾಣ ಬಿದ್ದಿಲ್ಲ. ಹೊಸ ಕಾಯ್ದೆ ಕಠಿಣವಾಗಿ ಜಾರಿಯಾಗಬಹುದು ಎನ್ನುವ ಊಹೆ ಸುಳ್ಳಾಗಿದೆ. ಪ್ರತಿದಿನ ಇಂಡಿ ತಾಲೂಕಿನಾಂದ್ಯಂತ ಅಕ್ರಮ ಗೋಮಾಂಸ ಸಾಗಾಟ, ಹಾಗೂ ಗೋ ಕಳ್ಳತನ ಎಗ್ಗಿಲ್ಲದೆ ನಡೆಯುತ್ತಿದೆ.ಇಂಡಿ ತಾಲೂಕಿನಾಂದ್ಯಂತ ಮತ್ತೆ ಗೋ ಕಳ್ಳರ ಅಟ್ಟಹಾಸ ಮಿತಿಮೀರಿದೆ. ಅಧಿಕಾರಿಗಳ ಕಣ್ಣು ತಪ್ಪಿಸಲು ಗೋ ಕಳ್ಳರು ನಾನಾ ರೀತಿಯ ತಂತ್ರ ಹೆಣೆಯುತ್ತಿದ್ದಾರೆ. ಇತ್ತೀಚಿನ ಕೆಲವೊಂದು ಪ್ರಕರಣಗಳನ್ನು ನೋಡವದಾದರೆ
ಪ್ರಕರಣ-1: ಸೆ.17 ರಂದು ಬುಲೆರೋ ವಾಹನದಲ್ಲಿ 60 ಕ್ಕೂ ಅಧಿಕ ಆಕಳು ಮತ್ತು ಸಣ್ಣ ಕರುಗಳನ್ನು ಕಟಾವು ಮಾಡಲು  ಮಾರಕಸ್ತ್ರಗಳ ಸಮೇತ ಕೊಂಡೊಯ್ಯುತ್ತಿದ್ದ ಗೋಕಳ್ಳರು ಇತ್ತೀಚೆಗೆ ಅಂಜುಟಗಿಯಲ ಗ್ರಾಮಸ್ಥರ ಬಲೆಗೆ ಬಿದ್ದಿದ್ದರು.
ಪ್ರಕರಣ 2: ಅಗಸ್ಟ:02 ರಂದು ಇಂಡಿ ತಾಲೂಕಿನ ಮಾವಿನಹಳ್ಳಿ ಗ್ರಾಮದ ರಸ್ತೆಯಲ್ಲಿ ಬರೋಬ್ಬರಿ  114 ಕ್ಕೂ ಗೋವುಗಳು ಸಾಗಾಟ ವೇಳೆ ಖಚಿತ ಮಾಹಿತಿಯ ಮೇರೆಗೆ  ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿ ವಶ ಪಡಿಸಿಕೊಂಡರು.
ಕೇವಲ 2 ತಿಂಗಳಲ್ಲಿ ನಡೆದ ಈ ಪ್ರಕರಣಗಳು ಉದಾಹರಣೆ ಸಾಕು, ಗೋ ಹತ್ಯಾ ನಿಷೇಧ ಕಾಯ್ದೆ ಇಂಡಿ ತಾಲೂಕಿನಾಂದ್ಯಂತ ಎಷ್ಟು ಪರಿಣಾಮಕಾರಿಯಾಗಿ ಜಾರಿಯಾಗಿದೆ ಅನ್ನೋದಕ್ಕೆ ಇದುವೇ ಸಾಕ್ಷಿ ಹೇಳುತ್ತಿದೆ. ಗೋ ಕಳ್ಳರಿಗೆ ಭಯಹುಟ್ಟಿಸುವ ಯಾವುದೇ ಅಂಶಗಳು ಈ ಕಾಯ್ದೆಯಲ್ಲಿ ಇಲ್ಲ ಅನ್ನೋದು ಈ ಮೂಲಕ ಸಾಬೀತಾಗಿದೆ. ದಿನ ಬೆಳಗಾದರೆ ಗೋ ಹತ್ಯದ ಪ್ರಕರಣಗಳು ಬೆಳಕಿಗೆ ಬರುತ್ತಿವೆ
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಪಶು ಆಸ್ಪತ್ರೆ ಡಾ! ಬಿ ಎಚ್ ಕನ್ನೂರ ಮಾತನಾಡಿದರು. ಕರ್ನಾಟಕ ಜಾನುವಾರು ಹತ್ಯೆ  ಪ್ರತಿಬಂಧಕ ಮತ್ತು ಸಂರಕ್ಷಣೆ  ಅಧಿನಿಯಮ 2020 ರ ಅಧಿಸೂಚನೆ ದಿನಾಂಕ 15-02-2021 ರಂದು ಹೊರಡಿಸಲಾಗಿ ದಿನಾಂಕ 25-02-2021 ರಿಂದ ಜಾರಿಗೆ ತರಲಾಗಿದೆ.13 ವರ್ಷ  ಮೇಲ್ಪಟ್ಟ  ಎಮ್ಮೆ ಅಥವಾ ಕೋಣವನ್ನು ಸಕ್ಷಮ  ಪ್ರಾಧಿಕಾರಿಯ ಶಿಫಾರಸ್ಸಿನ ಮೇರೆಗೆ ವಧೆಗೆ ಅವಕಾಶ ನೀಡಲಾಗಿದೆ
ಇದನ್ನು ಬಿಟ್ಟು ಆಕಳು, ಆಕಳು ಕರ ಗೂಳಿ ಮತ್ತು ಎತ್ತು ಹದಿಮೂರು ವರ್ಷದೊಳಗಿನ ಕೊಣ ಅಥವಾ ಎಮ್ಮೆ ಹತ್ಯೆ ಮಾಡಿದರೆ ನಮಗೆ ಮಾಹಿತಿ  ಬಂದ್ದರೆ ಪೊಲೀಸ್ ಇಲಾಖೆಗೆ ತಿಳಿಸಿ ರಕ್ಷಣೆಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಾಬೀತಾದರೆ ಅವರ ಮೇಲೆ ಕಾನೂನಿನ ಪ್ರಕ್ರಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!