ಉದಯವಾಹಿನಿ ಅಫಜಲಪೂರ: ಚಿತ್ತಾಪುರ ತಾಲ್ಲೂಕಿನ ಕಲಗುರ್ತಿ ಗ್ರಾಮದ ದೇವಾನಂದ ರಾಮಚಂದ್ರ ಆತ್ಮಹತ್ಯೆ ಪ್ರಕರಣದ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಕೋಲಿ,ಕಬ್ಬಲಿಗ ಸಮಾಜದ ಮುಖಂಡರ ನೇತೃತ್ವದಲ್ಲಿ ಚೌಡಾಪುರ ಗ್ರಾಮದಲ್ಲಿ  ಕಲಬುರಗಿ- ವಿಜಯಪುರ ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಯಿತು.ಕಲಬುರಗಿ ಜಿಲ್ಲೆಯ ಕಲಗುರ್ತಿ ಗ್ರಾಮದ ಹಿಂದುಳಿದ ವರ್ಗಕ್ಕೆ ಸೇರಿದ್ದ ದೇವಾನಂದ ರಾಮಚಂದ್ರ ಕೋರಬಾ ಎಂಬ ಯುವಕ 2023ರ ಜುಲೈ 20ರಂದು ಪೊಲೀಸರ ಕಿರುಕುಳ ತಾಳಲಾರದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈ ಆತ್ಯಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೂ ಆರೋಪಿಗಳನ್ನು ಬಂಧಿಸದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ದೂರಿದರು.
‘ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ, ಕೊಲಿ ಕಬ್ಬಲಿಗ ಸಮಾಜದ ಮುಖಂಡರ ಅವ್ವಣ್ಣ ಮ್ಯಾಕೇರಿ, ಕೋಲಿ/ಕಬ್ಬಲಿಗ ಸಮಾಜದ ದೇವಾನಂದ ರಾಮಚಂದ್ರ ಕೋರಬಾ ಅವರ ಆತ್ಮಹತ್ಯೆಗೆ ಶಿವರಾಜ ಪಾಟೀಲ, ಸಿದ್ದಣ್ಣಗೌಡ ಪಾಟೀಲ, ಅಣ್ಣಪ ಹಡಪದ ಮತ್ತು ಸಿದ್ದು ಅವರು ಕಾರಣವಾಗಿದ್ದು, ಕೂಡಲೇ ಅವರನ್ನು ಬಂಧಿಸಬೇಕು. ಈ ಬಗ್ಗೆ ಹಲವಾರು ಪ್ರತಿಭಟನೆ ಮತ್ತು ಮನವಿಗಳನ್ನು ಸಲ್ಲಿಸಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಈ ಪ್ರಕರಣದ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು. ಇದಲ್ಲದೇ ಮೃತ ದೇವಾನಂದ ಕುಟುಂಬಕ್ಕೆ 25 ಲಕ್ಷ ರೂಪಾಯಿ ಸರಕಾರದಿಂದ ಪರಿಹಾರ ಒದಗಿಸಬೇಕು. ಈಗಾಗಲೇ ದುಃಖಿತ ಕುಟುಂಬ ಪ್ರಾಣಾಪಾಯದಲ್ಲಿದ್ದು, ಸೂಕ್ತ ಭದ್ರತೆ ಒದಗಿಸುವುದರ ಜೊತೆಗೆ, ದೇವನಂದ ಕುಟುಂಬದ ಒಬ್ಬ ಸದಸ್ಯರಿಗೆ ಸರಕಾರಿ ನೌಕರಿ ಕೊಡಿಸಬೇಕು ಎಂದು ಒತ್ತಾಯಿಸಿದರು. ಇದಲ್ಲದೇ ಜಿಲ್ಲೆಯಲ್ಲಿ ಕೊಲಿ ಸಮಾಜದ ಮೇಲೆ ದೌರ್ಜನ್ಯ ದಿನೇ ದಿನೇ ಹೆಚ್ಚಾಗುತ್ತಿದೆ.ಇದರಿಂದ ನಮ್ಮ ಸಮಾಜಕ್ಕೆ ಈ ರೀತಿಯ ಧೋರಣೆ ತೊರುತ್ತಿರುವ ಸರಕಾರಕ್ಕೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೆವೆ ಎಂದರು.ಸುಮಾರು 4 ಗಂಟೆಗಳಿಗಿಂತ ಹೆಚ್ಚು ಕಾಲ ರಾಜ್ಯ ಹೆದ್ದಾರಿ ತಡೆದ ಪ್ರಯುಕ್ತ ಸಂಚಾರಕ್ಕೆ ಅಡಚಣೆ ಉಂಟಾಯಿತು. ಆಸ್ಪತ್ರೆಗೆ ತೆರಳುವ ರೋಗಿಗಳ ವಾಹನಗಳಿಗೆ ಪ್ರತಿಭಟನಾಕಾರರು ಅನುವು ಮಾಡಿಕೊಟ್ಟರು.ಇದೆ ಸಂದರ್ಭದಲ್ಲಿ ವರಲಿಂಗೇಶ್ವರ ಶ್ರೀಗಳು ವರವಗೊಂಡಗಿ ಜೇವರ್ಗಿ ಸೇರಿದಂತೆ ಕೊಲಿ ಸಮಾಜದ ಮುಖಂಡರಾದ, ದಿಗಂಬರ ಡಾಂಗೆ,ಯಲ್ಲಪ್ಪ ರಮಗಾ,ಲಕ್ಷ್ಮಣ ಹೇರೂರ, ದಿಗಂಬರ್ ಕಾಡಪಗೊಳ,ಅವ್ವಣ್ಣಗೌಡ ಪಾಟೀಲ,ಮಾಂತೇಶ ಸಪ್ಪನಗೋಳ,ಮಾಂತೇಶ ತಳವಾರ, ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!