ಉದಯವಾಹಿನಿ ದೇವದುರ್ಗ: ಸರಕಾರಿ ಪಾಲಿಟೆಕ್ನಿಕ್ ಕಾಲೇಜ್‍ನಲ್ಲಿ ಸುಮಾರು ವರ್ಷಗಳಿಂದ ಬೋಧನೆ ಮಾಡುತ್ತಿರುವ ಅರೆಕಾಲಿಕ ಉಪನ್ಯಾಸಕರ ಬೇಡಿಕೆಗಳು ಈಡೇರಿಸುವಂತೆ ಅರೆಕಾಲಿಕ ಉಪನ್ಯಾಸಕರ ಸಂಘದ ಉಪನ್ಯಾಸಕರು ಶಾಸಕಿ ಕರೆಮ್ಮ ಗೋಪಾಲಕೃಷ್ಣ ಕಾಲೇಜ್‍ಗೆ ಭೇಟಿ ನೀಡಿದ ವೇಳೆ ಮನವಿ ಸಲ್ಲಿಸಿದರು. ಈಹಿಂದೆ 2003-4 ಸಾಲಿನಲ್ಲಿ ಸರಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರನ್ನು ಪೂರ್ಣಕಾಲಿಕ ಉಪನ್ಯಾಸಕರಾಗಿ ಕಾಯಂಗೊಳಿಸಬೇಕು. ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದಂತೆ ನಮ್ಮನ್ನು ಸಹಾ ಪೂರ್ಣಕಾಲಿಕ ಉಪನ್ಯಾಸಕರಾಗಿ ಕಾಯಂಗೊಳಿಸಬೇಕು. ಅರೆಕಾಲಿಕ ಉಪನ್ಯಾಸಕರಿಗೆ ಸೇವಾಭದ್ರತೆಯನ್ನು ಒದಗಿಸಬೇಕು. ಉಪನ್ಯಾಸಕರ ನೇಮಕಾತಿಯಲ್ಲಿ ಅರೆಕಾಲಿಕ ಉಪನ್ಯಾಸಕರಿಗೆ ಅದ್ಯತೆ ನೀಡಿ, ಕನಿಷ್ಠ ವರ್ಷಕ್ಕೆ 5ರಂತೆ ಕೃಪಾಂಕವನ್ನು ನೀಡಬೇಕು. ಎಐಸಿಟಿಯ ನಿಯಮದಂತೆ ತಿಂಗಳಿಗೆ ವೇತನ ನಿಗದಿಗೊಳಿಸಬೇಕು. ತಿಂಗಳ ಮೊದಲನೇ ವಾರದಲ್ಲೇ ವೇತನ ಬಿಡುಗಡೆಗೊಳಿಸಬೇಕು. ವರ್ಷದ 12 ತಿಂಗಳು ವೇತನ ನೀಡಬೇಕು. ಮಹಿಳಾ ಅರೆಕಾಲಿಕ ಉಪನ್ಯಾಸಕರಿಗೆ ವೇತನ ಸಹಿತ ಹೆರಿಗೆ ರಜೆ ಕನಿಷ್ಠ 6ತಿಂಗಳು ಕೊಡಬೇಕು. ವಯೋಮಿತಿ ಮೀರಿರುವ ಮೀರುತ್ತಿರುವ ಅರೆಕಾಲಿಕ ಉಪನ್ಯಾಸಕರಿಗೆ ನೇಮಕಾತಿಯಲ್ಲಿ ಅದ್ಯತೆ ನೀಡಬೇಕು. ಪರೀಕ್ಷಾ ಕರ್ತವ್ಯಗಳು ಪರೀಕ್ಷಾ ಕೊಠಡಿ ಮೇಲ್ವಿಚಾರಕರು, ಮೌಲ್ಯಮಾಪನಗಳು ಹಾಗೂ ಇತರೆ ಕರ್ತವ್ಯಗಳನ್ನು ಒದಗಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದರು. ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ಹೊನ್ನಪ್ಪ, ಬಸವರಾಜ, ನವೀನ್, ಭಾಗ್ಯಶ್ರೀ, ಅನಿತಾ, ನಾಗರತ್ನ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!