
ಉದಯವಾಹಿನಿ ಶಿಡ್ಲಘಟ್ಟ: ಎರಡು ಮಂಗಗಳು ಕಿತ್ತಾಡಿಕೊಂಡು ಮರದಿಂದ ಕೆಳಕ್ಕೆ ಬಿದ್ದು ಬಾಯಾರಿಕೆಯಿಂದ ಬೆವರಿದ್ದ ಕೋತಿಯೊಂದಕ್ಕೆ ನೀರುಣಿಸುವ ಮೂಲಕ ಕೋಟಹಳ್ಳಿ ಗ್ರಾಮದ ದೇವರಾಜ್ ಮಾನವೀಯತೆ ಮೆರೆದಿದ್ದಾರೆ.ತಾಲ್ಲೂಕಿನ ಜಯಂತಿಗ್ರಾಮದ ದ್ಯಾವಪ್ಪನಗುಡಿ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಇನ್ನು ಕೋತಿ ಮರಿಯೊಂದು ಮರದ ಮೇಲಿಂದ ಕೆಳಗೆ ಬಿದ್ದು ಒದ್ದಾಡುತ್ತಿದ್ದಾಗ ಕೋಟಹಳ್ಳಿ ಗ್ರಾಮದ ದೇವರಾಜ್ ಎಂಬುವವರು ನೋಡಿ ತಕ್ಷಣ ಅದಕ್ಕೆ ನೀರು ಮತ್ತು ಹಾಲನ್ನು ಕುಡಿಸಿ ಅದಕ್ಕೆ ಜೀವ ನೀಡುತ್ತಿರುವ ದೃಶ್ಯವನ್ನು ನೋಡಬಹುದು. ಎಚ್ಚರವಾದ ನಂತರ ಕೋತಿ ಮರಿಯು ಎದ್ದು ಮರಕ್ಕೆ ಜಿಗಿಯಿತು.ಕೋಟಹಳ್ಳಿ ದೇವರಾಜ್ ಅವರು ಮಂಗನಿಗೆ ತೋರಿಸಿದ ಪ್ರೀತಿಯಿಂದ ಅದರ ಜೀವ ಉಳಿಯಿತು. ತಾಲೂಕಿನಾದ್ಯಂತ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಅವುಗಳನ್ನ ಕಂಡಾಗ ನಾವು ನೀವು ಮಾನವೀಯತೆ ನೀಡಿ ಪ್ರಾಣಿ-ಪಕ್ಷಿಗಳನ್ನ ಉಳಿಸುವಂತಹ ಕೆಲಸ ಮಾಡೋಣ.
