ಉದಯವಾಹಿನಿ ಹೊಸಕೋಟೆ : ಹೇಳೋರಿಲ್ಲ, ಕೇಳೋರಿಲ್ಲವೆಂದು ಇಷ್ಟ ಬಂದ ಹಾಗೆ ಕಳಪೆ ಕಾಮಗಾರಿ ಮಾಡಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕಳಪೆ ಕಾಮಗಾರಿ ಆಟ ತಾಲೂಕಿನಲ್ಲಿ ನಡೆಯಲು ಬಿಡುವುದಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ನಗರದ ತಾ ಪ೦ ಕಚೇರಿಯ ಸಭಾಂಗಣದಲ್ಲಿ ಜೆಜೆಎ0 ಯೋಜನೆಯ ಗುತ್ತಿಗೆದಾರರು ಹಾಗೂ ೨೮ ಗ್ರಾಪಂಯ ಪಿಡಿಒಗಳ ಸಭೆಯಲ್ಲಿ ಜೆಜೆಎಂ ಯೋಜನೆಯ ಕಾಮಗಾರಿ ಪ್ರಗತಿ ಕುರಿತು ಮಾತನಾಡಿದರು. ಜೆಜೆಎಂ ಯೋಜನೆ ಜಾರಿ ಬಗ್ಗೆ ಸ್ಥಳೀಯ ಗ್ರಾಪಂ ಗಳಿಗೆ ಮಾಹಿತಿ ನೀಡದೆ,ಯೋಜನೆಗೆ ಚಾಲನೆ ನೀಡಿರುವ ದೂರುಗಳು ಬಂದಿದೆ. ನಿಮ್ಮಿಷ್ಟ ಬಂದ೦ತೆ ಮಾಡಿ ಹೋದರೆ ಯಾರು ಹೇಳೋರು ಕೇಳೋರು ಇಲ್ವಾ?ತಾಲೂಕಿನಕೆಲವೆಡೆ ನಡೆದಿರುವ ಕಾಮಗಾರಿಗಳ ಬಗ್ಗೆ ಅಸಮಾಧಾನವಿದೆ. ಎರಡು ದಿನಗಳ ಹಿಂದೆ ದೊಡ್ಡನಲ್ಲೂರಹಳ್ಳಿಯಲ್ಲಿ ಕಾಮಗಾರಿ ವೀಕ್ಷಣೆ ಸಂದರ್ಭದಲ್ಲಿ ಕಳಪೆ ಕಂಡುಬ೦ದಿದೆ.
ಪಿಡಿಒಗಳ ಸಮ್ಮುಖದಲ್ಲಿಒಂದು ವಾರದಲ್ಲಿ ಗುಣಮಟ್ಟದ ಕಾಮಗಾರಿ ನಡೆಸಬೇಕು. ತಾಲೂಕಿನಲ್ಲಿಒಟ್ಟು 4 ೦ ಗುತ್ತಿಗೆದಾರರು 26೦ ಕೋಟಿರೂ. ವೆಚ್ಚದ ಜೆಜೆಎಂ ಕಾಮಗಾರಿ ನಡೆಸುತ್ತಿದ್ದು, ಸ್ಥಳೀಯ ಪಿಡಿಒಗಳ ಗಮನಕ್ಕೆ ತಂದು ಕೆಲಸ ಮಾಡಬೇಕು. ಪಿಡಿಒಗಳು ಕಾಮಗಾರಿ ಗುಣಮಟ್ಟ ಪರಿಶೀಲನೆ ನಂತರವಷ್ಟೆ ತಮ್ಮ ಸುಪರ್ದಿಗೆ ಜೆಜೆಎಂ ಯೋಜನೆ ತೆಗೆದುಕೊಳ್ಳಬೇಕೆಂದು ತಾಕೀತು ಮಾಡಿದರು.
ಸತತ ಆರು ಗ೦ಟೆ ಸಭೆ, ಅಲ್ಲೇಊಟ : ಮದ್ಯಾಹ್ನ 12 ಗಂಟೆಗೆ ಶುರುವಾದ ಸಭೆ ಸಂಜೆ 6 ಗಂಟೆಯವರೆಗೂ ನಡೆಯಿತು, ಊಟದ ಸಮಯದಲ್ಲಿ ಅಧಿಕಾರಿಗಳು ತಮ್ಮ ಗಡಿಯಾರ ನೋಡಿಕೊಳ್ಳುತ್ತಿದ್ದನ್ನು ಗಮನಿಸಿದ ಶಾಸಕರು, ನೀವು ಕುಳಿತ ಜಾಗಕ್ಕೆ ಊಟ ತರಿಸಿ ಸತತ 6  ತಾಸು ಸಭೆ ನಡೆಸಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.ಸಭೆಯಲ್ಲಿಜೆಜೆಎಂ ಸುಭಾನ್, ಎಇಇ ಮಹದೇವ್, ತಾಪಂ ಇಒ ಚಂದ್ರಶೇಖರ್, ಎಂಜನಿಯರ್ ದಿವ್ಯ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!