ಉದಯವಾಹಿನಿ ನಾಗಮಂಗಲ: ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಇಂದು ನಾಗಮಂಗಲ ತಾಲೂಕಿನ ಬೆಳ್ಳೂರಿನ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಇಂದು ಕೃಷಿ  ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ .ಚೆಲುವರಾಯಸ್ವಾಮಿ ಅವರು  68 ಸ್ವ-ಸಹಾಯ ಸಂಘಗಳಿಗೆ 3.53 ಕೋಟಿ ಬಡ್ಡಿ ರಹಿತ ಸಾಲ ಮಂಜೂರಾತಿ ಪತ್ರಗಳನ್ನು  ವಿತರಣೆ ಮಾಡಿದರು. ಗಾರ್ಮೆಂಟ್ಸ್ ಫ್ಯಾಕ್ಟರಿ:  ಮಹಿಳೆಯರ ಬೇಡಿಕೆಯಂತೆ ಉದ್ಯೋಗ ಮಾಡಲು ಅನುಕೂಲವಾಗುವಂತೆ ಬೆಳ್ಳೂರು ಕ್ರಾಸ್ ನಲ್ಲಿ ಮೊದಲು ಗಾರ್ಮೆಂಟ್ಸ್ ಪ್ರಾರಂಭಿಸಲಾಗುವುದು. ನಂತರ ಮಂಡ್ಯ, ಹ್ಯಾಂಡ್ ಪೋಸ್ಟ್, ಕೊಪ್ಪದಲ್ಲೂ ಗಾರ್ಮೆಂಟ್ಸ್ ಫ್ಯಾಕ್ಟರಿ ಪ್ರಾರಂಭಿಸಲಾಗುವುದು ಎಂದರು.ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿ* ಸರ್ಕಾರ ಮಹಿಳೆಯರು ಸೇರಿದಂತೆ ಎಲ್ಲಾ ಬಡ ಹಾಗೂ ಹಿಂದುಳಿದ ಕುಟುಂಬ ವರ್ಗದವರನ್ನು ಆರ್ಥಿಕವಾಗಿ ಸದೃಢ ಮಾಡಲು ಶಕ್ತಿ, ಗೃಹ ಲಕ್ಷ್ಮಿ, ಗೃಹ ಜ್ಯೋತಿ ಹಾಗೂ ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ‌. ಈ ಯೋಜನೆಗಳಡಿ ಪ್ರತಿ ಮಾಹೆ ಉಳಿತಾಯವಾಗುವ ಹಣವನ್ನು ಲೆಕ್ಕ ಮಾಡಿ. ಇದು ಸರ್ಕಾರ ನಿಮ್ಮನ್ನು ಆರ್ಥಿಕವಾಗಿ ಸದೃಢ ಮಾಡಲು ತಂದಿರುವ ಯೋಜನೆಗಳು. ಸದುಪಯೋಗ ಪಡಿಸಿಕೊಳ್ಳಿ ಎಂದರು.ಗೃಹಲಕ್ಷ್ಮೀ ಯೋಜನೆ ಈಗಾಗಲೇ ಜಾರಿಗೆ ಬಂದಿದ್ದು ಇನ್ನೂ ಅನೇಕ ಮಹಿಳೆಯರು ನೋಂದಣಿ ಮಾಡಿಕೊಂಡಿಲ್ಲ ಅವರಿಗೆ ನೋಂದಣಿ ಸಂಬಂಧ ಅವರ ಮನೆಯ ಬಾಗಿಲಿಗೆ ಹೋಗಿ ನೋಂದಣಿ ಮಾಡಿ ಎಂದು ಸಂಬಂಧಪಟ್ಟವರಿಗೆ  ತಿಳಿಸಿದರು.*134 ಕೋಟಿ ಸಾಲ* ಮೊದಲು  ಡಿ.ಸಿ.ಸಿ ಬ್ಯಾಂಕ್ ವತಿಯಿಂದ 2 ರಿಂದ 3 ಕೋಟಿ ನೀಡಲಾಗುತ್ತಿತ್ತು, ಇಂದು ವಿವಿಧ ಸಾಲ ಯೋಜನೆಯಡಿ  134 ಕೋಟಿ ಸಾಲ ನೀಡಲಾಗಿದೆ. ಇದರಲ್ಲಿ 80 ರಿಂದ 90 ಪ್ರತಿಶತ ಬಡ್ಡಿ ರಹಿತ ಸಾಲ ನೀಡಲಾಗಿದೆ. 5 ಲಕ್ಷ ಮೇಲ್ಪಟ್ಟು ಸಾಲ ಪಡೆದವರಿಗೆ ಮಾತ್ರ ಬಡ್ಡಿ ವಿಧಿಸಲಾಗುವುದು ಎಂದರು.
ಮಹಿಳಾ ಸಂಘಗಳಿಗೆ 16 ಕೋಟಿ ಸಾಲ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿಸಿ ಮಹಿಳಾ ಸಂಘಗಳಿಗೆ 30 ಕೋಟಿ ರೂ ವರೆಗೆ ಸಾಲ ನೀಡಿ ಎಂದರು.ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರ ಪತ್ನಿ ಧನಲಕ್ಷ್ಮಿ ಅವರು ಸಚಿವರೊಂದಿಗೆ ಭಾಗವಹಿಸಿ ಸಾಲ ಮಂಜೂರಾತಿ ಚೆಕ್ ವಿತರಿಸಿದರು.ಕಾರ್ಯಕ್ರಮದಲ್ಲಿ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಜೋಗೀಗೌಡ, ನಿರ್ದೇಶಕ ದಿನೇಶ್, ನರಸಿಂಹ ಮೂರ್ತಿ, ಅಶೋಕ್, ಚಂದ್ರಶೇಖರ್, ಡಿ.ಸಿ.ಸಿ ಬ್ಯಾಂಕ್ ಎಂ.ಡಿ ವನಜಾಕ್ಷಿ, ಮುಖಂಡರಾದ ಯಾಶೀನ್, ಉಮ್ರಾ ಜಹಾನ್ ಸೇರಿದಂತೆ ಇನ್ನಿತರ ‌ಗಣ್ಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!