ಉದಯವಾಹಿನಿ, ಇಂಡಿ: ಮನುಷ್ಯನು ವಿವೇಕದಿಂದ ಇರಬೇಕು. ದೇಹ,ಮನಸ್ಸು ಒಂದಾಗಿರಲು ಭಕ್ತಿ ಬೇಕು. ಶ್ರದ್ದೆಯ ಮೂಲಕ ನೋವು,ನಲಿವು,ತಲ್ಲಣಗಳನ್ನು ಭಕ್ತಿಯಿದ್ದರೆ ದೂರ ಮಾಡಬಹುದು. ಭಕ್ತಿಯಿಂದ ಮುಕ್ತಿ ಸಾಧ್ಯ. ತನು,ಮನ ಶುದ್ದಿಗೆ ಭಕ್ತಿ,ಅನುಭಾವ ಅಗತ್ಯವಾಗಿದೆ ಎಂದು ಗೋಳಸಾರದ ಪುಂಡಲಿಂಗ ಮಹಾಶಿವಯೋಗಿಗಳ ಮಠದ ಮಾತೋಶ್ರೀ ಗುರುದೇವಿ ಅಮ್ಮನವರು ಹೇಳಿದರು.
ಅವರು ಮಹಾಲಯ ಅಮವಾಸ್ಯೆಯ ನಿಮಿತ್ಯ ಶ್ರೀಮಠದಲ್ಲಿ ಹಮ್ಮಿಕೊಂಡ 192 ನೇ ಶಿವಾನುಭವ ಗೋಷ್ಠಿಯಲ್ಲಿ ಭಕ್ತಿ ವಿಷಯದ ಮೇಲೆ ಉಪನ್ಯಾಸ ನೀಡಿದರು.
ಭಕ್ತಿಯು ಶುದ್ಧತೆ ಮತ್ತು ಶಕ್ತಿಯಿಂದ ಸೀಮಿತವಾಗಿದೆ.ನಂಬಿಕೆಗಿಂತ ಲೌಕಿಕ ಭಕ್ತಿಯು ಅತ್ಯುತ್ತಮವಾದ ಭಕ್ತಿಯಾಗಿದೆ.ಆಂತರಿಕ ಜಾಗೃತಿಯ ಆರಂಭಿಕ ಹಂತವಾಗಿ ಒಬ್ಬರು ಭಕ್ತಿಯನ್ನು ಅನುಭವಿಸಬಹುದು.ದೇವರ ಮೇಲಿನ ಭಕ್ತಿಯು ಯಾವಾಗಲೂ ಮಾನವನ ಭಯ ಮತ್ತು ದುರಾಸೆಯನ್ನು ನಾಶಪಡಿಸುತ್ತದೆ.ಅನೇಕ ಅಸುರರು ಶಿವನ ಮಹಾನ್‍ಭಕ್ತರಾಗಿದ್ದರು.ಆದರೆ ನಿಜವಾದ ಭಕ್ತಿ ಎಂದರೆ ತ್ಯಾಗ.ನಮಗೆ ದೊರೆತಿರುವ ಈ ಮಾನವ ಜನ್ಮವು ಅಪರೂಪವಾದುದು,ಅಮೂಲ್ಯವಾದುದು.ಸಂತರು,ಶರಣರು,ಸದ್ಗುರುಗಳು ನಮಗೆ ಕರುಣೆಯ ಕೈ ನೀಡಿ ಮುನ್ನಡೆಸುವುದಕ್ಕೆ ಸದಾ ಸಿದ್ಧರಿದ್ದಾರೆ. ಶರಣರು,ಸಂತರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರು ತೋರಿರುವ ಉತ್ತಮ ಮಾರ್ಗದಲ್ಲಿ ನಡೆಯುವ ಮೂಲಕ ಭಕ್ತಿಯ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.ಭಗವಂತನಲ್ಲಿ ಭಕ್ತಿ ಇರಿಸಿದರೆ ಕಷ್ಟ,ಕಾರ್ಪಣ್ಯಗಳನ್ನು ಪರಿಹಸಿ,ಸಂತೋಷ ಪಡಿಸುತ್ತಾನೆ ಎಂಬ ನಂಬಿಕೆ ಇಟ್ಟುಕೊಳ್ಳಬೇಕು ಎಂದರು.
ಅಭಿನವ ಪುಂಡಲಿಂಗ ಮಹಾಶೀವಯೋಗಿಗಳು ಸಾನಿಧ್ಯ ವಹಿಸಿದ್ದರು. ರವೀಂದ್ರ ಆಳೂರ, ಶಿವಲಿಂಗಪ್ಪ ನಾಗಠಾಣ ಸೇರಿದಂತೆ ಭಕ್ತರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಬಿ.ವಿ.ಬೋಸಲೆ,ಹಣಮಂತ ವಗ್ಗೆ ಪ್ರಸಾದ ಸೇವೆ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!